ಮಂಗಳೂರು, ಡಿ 15 (DaijiworldNews/SK): ಮಂಗಳೂರಿನಿಂದ ಹೊರಟ ಶೆಲ್ ಕಂಪೆನಿಯ ವೈಮಾನಿಕ ಇಂಧನ ಹೊತ್ತ ಹಡಗಿನ ಮೇಲೆ ಡಿ. ೧೧ ರಂದು ಕಡಲ್ಗಳ್ಳರು ಕೆಂಪು ಸಮುದ್ರವನ್ನು ಸಂಪರ್ಕಿಸುವ ಬಾಬ್ ಎಲ್-ಮಾಂಡೆಬ್ ಜಲಸಂಧಿಯಲ್ಲಿ ಕ್ಷಿಪಣಿ ದಾಳಿ ನಡೆಸಿದ್ದಾರೆ.
ಮಂಗಳೂರಿನ ಎಂಆರ್ಪಿಎಲ್ನಲ್ಲಿ ಉತ್ಪಾದನೆಯಾದ ವೈಮಾನಿಕ ಇಂಧನವನ್ನು ಶೆಲ್ ಕಂಪೆನಿಯು ಖರೀದಿಸಿ ಡಿ. ೬ ರಂದು ನೆದರ್ಲೆಂಡ್ಗೆ ಸಾಗಾಟ ಮಾಡುತ್ತಿತ್ತು. ಈ ವೇಳೆ ಕಡಲ್ಗಳ್ಳರು ದಾಳಿ ನಡೆಸಿದ್ದಾರೆ. ಆದರೆ ಅದೃಷ್ಟವಶಾತ್ ಕಡಲ್ಗಳ್ಳರ ಗುರಿ ತಪ್ಪಿದ ಪರಿಣಾಮ ಘಟನೆಯಿಂದ ಯಾವುದೇ ನಾಶ-ನಷ್ಟ ಸಂಭವಿಸಿಲ್ಲ ಎಂದು ಬ್ರಿಟನ್ ರಕ್ಷಣಾ ಪಡೆಯೂ ದೃಢಪಡಿಸಿದೆ.
ಇನ್ನು ಈ ಘಟನೆ ನಡೆದ ಸಂದರ್ಭದಲ್ಲಿ ಸಮೀಪದಲ್ಲಿ ಇದ್ದ ಅಮೆರಿಕದ ಸಮರ ನೌಕೆ ಶಂಕಿತ ಹೌದಿ ಡ್ರೋನ್ ಅನ್ನು ಹೊಡೆದುರುಳಿಸಿದೆ ಎಂದೂ ವರದಿ ತಿಳಿಸಿದೆ.