ಮಂಗಳೂರು, ಡಿ 14 (DaijiworldNews/MS): ಇಸ್ರೇಲ್'ನಲ್ಲಿ ದುಡಿಯುತ್ತಿರುವ ಕರಾವಳಿಗರು ಹುಟ್ಟುಹಾಕಿದ "ಅನುಗ್ರಹ ಇಸ್ರೇಲ್ ಚಾರಿಟಿ ತಂಡ" ನೂರಾರು ಅಶಕ್ತರಿಗೆ ಆಸರೆಯಾಗಿದೆ.
2020ರ ಸೆ. 08ರಂದು 30 ಸದಸ್ಯರೊಂದಿಗೆ ಪ್ರಾರಂಭವಾದ ಸಂಸ್ಥೆ ಇದೀಗ 80 ಸದಸ್ಯರನ್ನು ಹೊಂದಿದ್ದು, ತಾಯ್ನಾಡಿನಲ್ಲಿರುವ ಅಸಹಾಯಕರಿಗೆ ನೆರವು ನೀಡುವುದು ಸಂಸ್ಥೆಯ ಮೂಲ ಉದ್ದೇಶವಾಗಿದೆ.
ಅನುಗ್ರಹ ಇಸ್ರೇಲ್ ಚಾರಿಟಿ ತಂಡ ಕೇವಲ 2 ವರ್ಷದಲ್ಲಿ 100 ಕುಟುಂಬಗಳಿಗೆ ಅಂದರೆ ಒಂದು ಕುಟುಂಬಕ್ಕೆ ತಲಾ 40 ಸಾವಿರ ರೂಪಾಯಿಗಳಂತೆ 40 ಲಕ್ಷ ರೂಪಾಯಿ ಗಳನ್ನು ಸಹಾಯ ಹಸ್ತ ನೀಡಿದೆ. ಇವುಗಳಲ್ಲಿ ಪ್ರಮುಖವಾಗಿ ವಸತಿರಹಿತರಿಗೆ ಹಾಗೂ ವೈದ್ಯಕೀಯ ವೆಚ್ಚಕ್ಕೆ ಆರ್ಥಿಕ ನೆರವು ಒದಗಿಸಿದೆ
ನಾವೆಲ್ಲ ಪ್ರಕೃತಿಯ ಫಲಾನುಭವಿಗಳು ಅದೇ ರೀತಿ ಅನುಗ್ರಹ ತಂಡ ಇಸ್ರೇಲ್ ಮೇಲುಕೀಳು ಎಂಬ ಭಾವನೆಗಳನ್ನು ಇರಿಸದೇ ಎಲ್ಲರಿಗೋಸ್ಕರ ಇಸ್ರೇಲ್ ನಲ್ಲಿ ದುಡಿಯುವ ನಮ್ಮ ಮಿತ್ರರ ತಂಡ ಕೆಲಸ ಮಾಡಲಿದೆ ಎಂದು ಅನುಗ್ರಹ ಇಸ್ರೇಲ್ ಚಾರಿಟಿ ತಂಡ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.