ಮಂಗಳೂರು, ಡಿ13 (DaijiworldNews/MR): ಕೊವೀಡ್ ಸಾಂಕ್ರಮಿಕದ ಮೊದಲು ಇದ್ದಂತೆ, ಇಡೀ ರಾತ್ರಿ ಯಕ್ಷಗಾನದ ಪ್ರದರ್ಶನ ಮಾಡಬಹುದು ಎಂಬ ಹೈಕೋರ್ಟ್ ಅಭಿಪ್ರಾಯಪಟ್ಟಿದ್ದು, ಆದರೆ ಇದರ ಅನುಷ್ಠಾನಕ್ಕೆ ಇದೀಗ ತಾಂತ್ರಿಕ ಸಮಸ್ಯೆಯೊಂದು ಎದುರಾಗಿದೆ.
ಕಟೀಲು ಶ್ರೀ ದುರ್ಗಾಪರಮೇಶ್ವರೀ ದಶಾವತಾರ ಯಕ್ಷಗಾನ ಮಂಡಳಿಯಿಂದ ಯಕ್ಷಗಾನ ಮೇಳಗಳಿಗೆ ನಿಗದಿತ ವೇಳಾಪಟ್ಟಿಯಂತೆ ಪ್ರದರ್ಶಿಸಲು ಅನುಮತಿ ನೀಡುವಂತೆ ಕೋರಿ ಕೃಷ್ಣ ಕುಮಾರ್ ಹೈಕೋರ್ಟ್ಗೆ 15-11-2022ರಲ್ಲಿ ಅರ್ಜಿ ಸಲ್ಲಿಸಿ ಜಿಲ್ಲಾಧಿಕಾರಿಗಳ ಆದೇಶಕ್ಕೆ ತಡೆಯಾಜ್ಞೆ ಕೋರಿದ್ದರು . ಇನ್ನೂ ಇದಕ್ಕೆ ಅವಕಾಶ ನೀಡಿದ ಹೈಕೋರ್ಟ್ ಶಬ್ದ ಮಾಲಿನ್ಯ ನಿಯಮಗಳ ಉಲ್ಲಂಘನೆ ಮಾಡಬಾರದು ಎಂದು ತಿಳಿಸಿ ಹೈಕೋರ್ಟ್ ಷರತ್ತು ವಿಧಿಸಿದೆ್. ಅರ್ಜಿದಾರರು ತಮ್ಮ ಕೋರಿಕೆಯನ್ನು ಜಿಲ್ಲಾಧಿಕಾರಿಗೆ ಸಲ್ಲಿಸಬೇಕು ಮತ್ತು ಆದೇಶದಲ್ಲಿ ಉಲ್ಲೇಖಿಸಲಾದ ನಿಬಂಧನೆಗಳನ್ನು ಪಾಲಿಸಬೇಕು ಎನ್ನಲಾಗಿದೆ.
ಹೈಕೋರ್ಟ್ ಅನುಮೋದನೆಯ ಹೊರತಾಗಿಯೂ, ಈ ಕೆಲಸವು ಕಾರ್ಯರೂಪಕ್ಕೆ ತರುವುದು ಕಷ್ಟವಿದೆ. ಯಾಕೆಂದರೆ ಇಲ್ಲಿ ಮುಖ್ಯ ಸಮಸ್ಯೆಯೆಂದರೆ ಡೆಸಿಬಲ್ ನ ಮಟ್ಟ. ಜನರು ಮಾತನಾಡುವಾಗ, ಧ್ವನಿ 50 ಡಿಬಿ ಇರುತ್ತದೆ. ಒಂದು ಚೆಂಡೆಯ ಶಬ್ಧ 200 ಡಿಬಿ, ಮತ್ತು ಧ್ವನಿ ವರ್ಧಕದ ಕನಿಷ್ಠ ಶಬ್ಧ ಡಿಬಿ 450-500 ಆಗಿದೆ. ಈ ವಿಷಯವನ್ನು ನಾವು ಈ ಹಿಂದೆ ಸೌಂಡ್ ಇಂಜಿನಿಯರ್ ಗಳೊಂದಿಗೆ ಚರ್ಚಿಸಿದ್ದೇವೆ. ಆದರೆ, ಸುಪ್ರೀಂ ಕೋರ್ಟ್ ನಿರ್ದೇಶನದ ಪ್ರಕಾರ, ರಾತ್ರಿ 10 ರಿಂದ ಬೆಳಿಗ್ಗೆ 6 ರವರೆಗೆ 50 ಡೆಸಿಬಲ್ ಮೀರಬಾರದು ಎಂಬ ಆದೇಶವಿದೆ. ಹೀಗಾಗಿ ರಾತ್ರಿ ಪೂರ್ತಿ ಯಕ್ಷಗಾನ ನಡೆಸುವುದು ಕಷ್ಟ ಎನ್ನುವುದು , ಕಟೀಲು ಮೇಳಕ್ಕೆ ಸಂಬಂಧಿಸಿದ ಅಭಿಪ್ರಾಯವಾಗಿದೆ.