ಮಂಗಳೂರು, ಡಿ 12 (DaijiworldNews/AK): ಅಂತರಾಜ್ಯ ಸ್ಪಿರಿಟ್ ಮಾರಾಟ ದಂಧೆ ನಡೆಯುತ್ತಿದ್ದ ತಲಪಾಡಿ ಸಾಂತ್ಯ ಬಳಿ ಅಬಕಾರಿ ಪೊಲೀಸರಿಂದ ದಾಳಿ ನಡೆಸಿದ್ದಾರೆ.
ಆರೋಪಿ ನಿತ್ಯಾನಂದ ಭಂಡಾರಿ ಪರಾರಿ ಕೇರಳಗಡಿ ಭಾಗ ಕಿನ್ಯಾ ಗ್ರಾಮದ ಸಾಂತ್ಯ ಎಂಬಲ್ಲಿನ ಮನೆಯಲ್ಲಿ ನಡೆಯುತ್ತಿದ್ದ ದಂಧೆ 2240 ಲೀಟರ್ ಮದ್ಯ ಸಾರ , 222 ಲೀಟರ್ ನಕಲಿ ಬ್ರಾಂಡಿ ಸಹಿತ ಯಂತ್ರಗಳು ವಶಕ್ಕೆ ಪಡೆಯಲಾಯಿತು.
ಕೇರಳ ರಾಜ್ಯಕ್ಕೆ ಸಾಗಾಟ ನಡೆಸಲು ನಡೆಯುತ್ತಿದ್ದ ದಂಧೆ ಮೇಲೆ ಅಬಕಾರಿ ನಿರೀಕ್ಷಕರು ಮಂಗಳೂರು ದಕ್ಷಿಣ ವಲಯದ ಕಮಲಾ ಹೆಚ್.ಎನ್, ಉಪಾಧೀಕ್ಷಕರುಗಳಾದ ಸೈಯ್ಯದ್ ತಫ್ಜೀಲುಲ್ಲಾ ಇವರ ಮಾರ್ಗದಶನದಲ್ಲಿ , ಅಬಕಾರಿ ಜಂಟಿ ಆಯುಕ್ತರು ಮಂಗಳೂರು ವಿಭಾಗ ನಾಗರಾಜಪ್ಪ ಟಿ. ಹಾಗೂ ಡೆಪ್ಯುಟಿ ಕಮೀಷನರ್ ಎಕ್ಸೈಸ್ ಟಿ.ಎಂ ಶ್ರೀನಿವಾಸ್ ನಿರ್ದೇಶನದಲ್ಲಿ ನಡೆದ ದಾಳಿ ನಡೆಸಲಾಯಿತು. ಕಾರ್ಯಚರಣೆಯಲ್ಲಿ ಸುಮಾರು 25 ಕ್ಕೂ ಅಧಿಕ ಅಬಕಾರಿ ಅಧಿಕಾರಿಗಳು ಭಾಗಿಯಾಗಿದ್ದಾರೆ.