ಉಡುಪಿ , ಡಿ 12 (DaijiworldNews/AK): . ಝಾರ್ಖಂಡ್ ನ ಕಾಂಗ್ರೆಸ್ ಸಂಸದನ ಮನೆಯಲ್ಲಿ ಪತ್ತೆಯಾದ 350 ಕೋಟಿ ರುಪಾಯಿ ಭ್ರಷ್ಟಾಚಾರ ಮಾಡಿದ ಪ್ರಸಾದ್ ಸಾಹು ನನ್ನು ಗಲ್ಲಿಗೇರಿಸಬೇಕು ಎಂದು ಬಿಜೆಪಿ ಮಂಗಳೂರು ಪ್ರಭಾರಿ ಉದಯ್ ಕುಮಾರ್ ಶೆಟ್ಟಿ ಆಗ್ರಹಿಸಿದರು.
ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು “ಸಾರ್ವಜನಿಕ ಹಣವನ್ನು ಭ್ರಷ್ಟಾಚಾರದ ಮೂಲಕ ಸಂಗ್ರಹ ಮಾಡಲಾಗಿದೆ. ಇಂತಹ ನಾಯಕನ್ನು ಗಲ್ಲಿಗೇರಿಸಬೇಕು ಎಂದರು.
ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಮಾತನಾಡಿ, ಪ್ರಸಾದ್ ಸಾಹು ಮನೆಯಲ್ಲಿ ಸಿಕ್ಕಿರುವ 350 ಕೊಟಿ ರೂಪಾಯಿ ಮೂಲಕ ಕಾಂಗ್ರೆಸ್ ಭ್ರಷ್ಟಾಚಾರದದಲ್ಲಿ ಎಷ್ಟು ಪಳಗಿದೆ ಎಂಬುವುದನ್ನು ತೋರಿಸುತ್ತದೆ. ಯಾವಾಗ ಎಲ್ಲಾ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಾ ಪ್ರತಿ ಬಾರಿ ಭ್ರಷ್ಟಾಚಾರದ ಕೂಪವನ್ನೇ ತೋಡಿಕೊಂಡು ಹೋಗುತ್ತದೆ. ಕರ್ನಾಟಕದಲ್ಲಿ ಕಳೆದ 6 ತಿಂಗಳಿನಲ್ಲಿ ಯಾವುದೇ ಇಲಾಖೆಗಳಲ್ಲಿ ಭ್ರಷ್ಟಾಚಾರ ಇಲ್ಲದೇ ಕೆಲಸ ಆಗುತ್ತಿಲ್ಲ.
ಅಧಿವೇಶನದ ಬಳಿಕ ಕರ್ನಾಟಕದ ಅಭಿವೃದ್ದಿಗೆ ಗಮನ ಹರಿಸದೇ ಇದ್ದಲ್ಲಿ, ಮುಂದಿನ ಚುನಾವಣೆಗಳಲ್ಲಿ ಕಾಂಗ್ರೆಸ್ ಸೋಲುವುದು ಗ್ಯಾರಂಟಿ. ಈ ದೇಶಕ್ಕೆ ಕಾಂಗ್ರೆಸ್ ಮಾರಕ. ಕಾಂಗ್ರೆಸ್ ತನ್ನ ಮನಸ್ಥಿತಿ ಬದಲಾವಣೆ ಮಾಡದೇ ಇದ್ದಲ್ಲಿ ಕಾಂಗ್ರೆಸ್ ಮುಕ್ತ ಭಾರತ ಆಗುವುದು ಖಂಡಿತ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.