ಮಂಗಳೂರು,ಏ 18(Daijiworld News/MSP): ಕಳೆದ ೨೦೧೪ರ ಲೋಕಸಭೆ ಚುನಾವಣೆಗೆ ಹೋಲಿಸಿದರೆ, ಈ ಬಾರಿ ದಕ್ಷಿಣ ಕನ್ನಡದಲ್ಲಿ ಉತ್ತಮ ಪ್ರಮಾಣದ ಮತದಾನವಾಗಿದ್ದು, ಮಧ್ಯಾಹ್ನದ ವೇಳೆಗೆಯೇ ನಿರೀಕ್ಷೆಗೂ ಮೀರಿದ ಮತದಾನ ಆಗಿರುವುದು ಗಮನಾರ್ಹ.
ದಕ್ಷಿಣ ಕನ್ನಡ ಲೋಕಸಭೆ ಕ್ಷೇತ್ರದಲ್ಲಿ ಮಧ್ಯಾಹ್ನ 3 ಗಂಟೆ ವೇಳೆಗೆ ಒಟ್ಟಾರೆ ಶೇ.60.02ರಷ್ಟು ಮತದಾನ ಆಗಿದೆ. ಬೆಳ್ತಂಗಡಿ ವಿಧಾನಸಭೆ ಕ್ಷೇತ್ರದಲ್ಲಿ ಶೇ.60.57ರಷ್ಟು, ಮೂಡಬಿದಿರೆ ವಿಧಾನಸಭೆ ಕ್ಷೇತ್ರದಲ್ಲಿ ಶೇ.54.02ರಷ್ಟು, ಮಂಗಳೂರು ಉತ್ತರ ವಿಧಾನಸಭೆ ಕ್ಷೇತ್ರದಲ್ಲಿ 58.33, ಮಂಗಳೂರು ದಕ್ಷಿಣದಲ್ಲಿ ಶೇ.54.49ರಷ್ಟು, ಮಂಗಳೂರು ಕ್ಷೇತ್ರದಲ್ಲಿ 57.47ರಷ್ಟು, ಬಂಟ್ವಾಳ ವಿಧಾನಸಭೆ ಕ್ಷೇತ್ರದಲ್ಲಿ 62.05ರಷ್ಟು, ಪುತ್ತೂರು ವಿಧಾನಸಭೆ ಕ್ಷೇತ್ರದಲ್ಲಿ 64.06ರಷ್ಟು ಹಾಗೂ ಸುಳ್ಯ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ 65.04ರಷ್ಟು ಪ್ರಮಾಣದಲ್ಲಿ ಮತದಾನ ನಡೆದಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.
ಜಿಲ್ಲೆಯಲ್ಲಿ ಪ್ರತಿ ಬಾರಿಯೂ ಸುಳ್ಯ ವಿಧಾನಸಭೆ ಕ್ಷೇತ್ರದಲ್ಲಿ ಅತಿಹೆಚ್ಚು ಪ್ರಮಾಣದಲ್ಲಿ ಶೇಕಡಾವಾರು ಮತದಾನವಾಗುತ್ತದೆ. ಅದೇರೀತಿ, ಸದ್ಯದ ಪರಿಸ್ಥಿತಿ ನೋಡಿದರೆ, ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿಯೂ ಜಿಲ್ಲೆಯಲ್ಲಿ ಉಳಿದ ಏಳು ವಿಧಾನಸಭೆ ಕ್ಷೇತ್ರಗಳಿಗೆ ಹೋಲಿಸಿದರೆ, ಸುಳ್ಯದಲ್ಲಿ ಸದ್ಯಕ್ಕೆ ಅತಿಹೆಚ್ಚಿನ ಮತದಾನ ಆಗಿರುವುದು ಕಂಡುಬಂದಿದೆ.