ಸುರತ್ಕಲ್, ಡಿ 10(DaijiworldNews/AK): ಎನ್ಐಟಿಕೆ ಟೋಲ್ ಗೇಟ್ ನ ಅವಶೇಷಗಳಿಗೆ ಲಾರಿ ಡಿಕ್ಕಿ ಓರ್ವನಿಗೆ ಗಾಯಗೊಂಡು ಆಸ್ಪತ್ರೆ ದಾಖಲಾದ ಘಟನೆ ತಡ ರಾತ್ರಿ 2.30ಕ್ಕೆ ನಡೆದಿದೆ. ಉಡುಪಿ ಕಡೆಯಿಂದ ಮಂಗಳೂರಿನತ್ತ ಸಂಚರಿಸುತ್ತಿದ್ದ ಲಾರಿ ಡಿಕ್ಕಿ ಅಪಘಾತದ ತೀವ್ರತೆಗೆ ಟೋಲ್ ಗೇಟ್ ನ ಕಂಬ ಬುಡ ಸಮೇತ ಎದ್ದು ಬಂದಿದೆ.
ಟೋಲ್ ಬೂತ್ ನ ಒಂದು ಪಾಶ್ವ ಸಂಪೂರ್ಣ ಹಾನಿ ಘಟನಾ ಸ್ಥಳಕ್ಕೆ ಮಂಗಳೂರು ಉತ್ತರ ಸಂಚಾರ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದರು.
ಈ ಸ್ಥಳ ಕತ್ತಲಲ್ಲಿ ದಿಢೀರ್ ಎದುರಾಗುವ ಅಪಘಾತದ ಸ್ಪಾಟ್ ಆಗಿದೆ. ಅಪಘಾತದಿಂದ ಕಂಬಗಳು ಜಾರಿ ಕುಸಿಯುವ ಭೀತಿ ಎದುರಾಗಿದೆ. ನಿರುಪಯುಕ್ತ ಟೋಲ್ ಗೇಟ್ ಜನಪ್ರತಿನಿಧಿಗಳು, ಜಿಲ್ಲಾಡಳಿತದ ನಿರ್ಲಕ್ಷ್ಯ, ಕರ್ತವ್ಯಲೋಪದಿಂದ ವಾಹನ ಸವಾರರ ಪಾಲಿಗೆ ಮಾರಣಾಂತಿಕವಾಗಿದೆ.