ಉಡುಪಿ ಡಿ,9(DaijiworldNews/SK): ಸ್ಯಾಂಡಲ್ವುಡ್ನ ಹಿರಿಯ ನಟಿ ಲೀಲಾವತಿ ಸ್ವರ್ಗಸ್ಥರಾಗಿದ್ದಾರೆ. ಲೀಲಾವತಿಯವರು ತಮ್ಮ ಬದುಕಿನ ಬಂಡಿಯನ್ನು ಕಷ್ಟದಲ್ಲೇ ದೂಡಿದವರು. ತಮ್ಮ ಜೀವನದಲ್ಲಿ ಎದುರಾದ ಎಲ್ಲಾ ಅವಮಾನಗಳನ್ನು ಸಹಿಸಿಕೊಂಡು ಬದುಕಿದವರು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಲೀಲಾವತಿಯವರು ದುಃಖವನ್ನು ನುಂಗಿ ಬದುಕಿದ ಕಲಾವಿದೆ. ತಮ್ಮ ಕಷ್ಟದ ಜೀವನದಲ್ಲೂ ಸಮಾಜಕ್ಕೆ ಏನಾದರೂ ಮಾಡಬೇಕೆಂಬ ಛಲಹೊಂದಿದ್ದ ಅವರು, ಸಮಾಜ ಸೇವೆಯ ಮೂಲಕವೇ ಕೊನೆಯ ದಿನಗಳನ್ನು ಖುಷಿಯಾಗಿ ಕಳೆದರು ಎಂದರು.
ಹಿರಿಯ ನಟಿ ಲೀಲಾವತಿ ನಮ್ಮೂರಿನವರು. ನನಗೆ ಸಿಕ್ಕಾಗೆಲ್ಲ ತುಳುವಿನಲ್ಲೇ ಮಾತನಾಡುತ್ತಿದ್ದರು. ಬಣ್ಣದ ಬದುಕು ಕಟ್ಟಲೇಂದು ಬೆಂಗಳೂರಿನಲ್ಲಿ ನೆಲೆಸಿ ಚಲನಚಿತ್ರರಂಗಕ್ಕೆ ಅಪಾರ ಸೇವೆ ನೀಡಿದ್ದಾರೆ. ಆದರೆ ಇವರ ಜೀವನ ಮಾತ್ರ ಸುಲಭಕಾರವಾಗಿರಲಿಲ್ಲ. ಆದರೂ ಸಮಾಜ ಸೇವೆ, ಪ್ರಾಣಿಗಳ ಸೇವೆಯನ್ನು ಮಾಡುತ್ತ ತಮ್ಮ ಜೀವನವನ್ನು ಕಳೆದವರು.
ಇನ್ನು ಲೀಲಾವತಿ ಅವರ ಅಗಲಿಕೆ ವಿನೋದ್ ರಾಜ್, ಕುಟುಂಬ ಬಂಧು ಬಳಗಕ್ಕೆ ನೋವು ಸಹಿಸುವ ಶಕ್ತಿ ಕೊಡಲಿ ಎಂದು ಸಂತಾಪ ಸೂಚಿಸಿದರು.