ಉಡುಪಿ, ಡಿ 09 (DaijiworldNews/MS): ತಾನು ಹೋನರ್ಸ್ ಆಗಿ ಕೆಲಸಮಾಡುತಿದ್ದ ಮನೆಯ ವಾಹನದ ಡ್ಯಾಶ್ಬೋರ್ಡನಲ್ಲಿ ಇಟ್ಟಿದ ಹಣವನ್ನು ಕದ್ದು ಪರಾರಿಯಾಗಿದ್ದ ವ್ಯಕ್ತಿಯೋರ್ವನನ್ನು ಉಡುಪಿ ನಗರ ಠಾಣಾ ಪೋಲಿಸರು ಬಂಧಿಸಿದ್ದಾರೆ.
ಬಂಧಿತನನ್ನು ಹುನಗುಂದ ತಾಲೂಕಿನ ಪ್ರವೀಣ್ ಕುಮಾರ್ ಜಾಲಪ್ಪ ಹರದೊಳ್ಳೀ (34), ಎಂದು ಗುರುತಿಸಲಾಗಿದೆ.
ಉಡುಪಿಯ ಪುತ್ತೂರು ಗ್ರಾಮದ ಸಂತೋಷ್, ಮಾತಾ ಸೆಲ್ಯೂಷನ್ ಹೋಮ್ ನರ್ಸ್ ಸಂಸ್ಥೆಯಿಂದ ಪ್ರವೀಣ್ ಕುಮಾರ್ ಜಾಲಪ್ಪ ಹರದೊಳ್ಳ ಎಂಬಾತನನ್ನು ಹೋಂ ನರ್ಸ್ ಕೆಲಸಕ್ಕೆ ಇಟ್ಟುಕೊಂಡಿದ್ದರು. ಪ್ರವೀಣನು ಡಿಸೆಂಬರ್ 04 ಸಂಜೆ 06:30 ರಿಂದ ಆತನು ಮನೆಯಲ್ಲಿ ಕಾಣದೆಯಿದ್ದು, ಮನೆಗೆ ವಾಪಸ್ಸು ಬಾರದೇ ಇದ್ದುದ್ದರಿಂದ ಪ್ರವೀಣನ ಬಗ್ಗೆ ವಿಚಾರಿಸಿದಾಗ ಆತ ತನ್ನ ಸಂಸ್ಥೆಗೂ ಹೋಗದೇ ಇದ್ದಾಗ ಅನುಮಾನ ಬಂದಿತ್ತು. ಮಾತ್ರವಲ್ಲದೇ ಮನೆಯಲ್ಲಿ ಹಾಗೂ ಬೊಲೆರೋ ವಾಹನದ ಡ್ಯಾಶ್ ಬೋರ್ಡನಲ್ಲಿಟ್ಟಿದ್ದ 3,45,000/- ರೂ. ಹಣವನ್ನು ಕಳವಾಗಿತ್ತು. ಈ ಬಗ್ಗೆಸಂತೋಷ್ ಅವರು ನೀಡಿದ ದೂರಿನಂತೆ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ತಕ್ಷಣ ಕಾರ್ಯಾಚರಣೆಗಿಳಿದ ಪೊಲೀಸರು ಪ್ರವೀಣ್ ಕುಮಾರ್ ಜಾಲಪ್ಪ ನನ್ನು ಬಾಗಲಕೋಟೆಯಲ್ಲಿ ವಶಕ್ಕೆ ಪಡೆದು ಕಳವು ಮಾಡಿದ್ದ 3,13,500 ರೂ. ಸ್ವಾಧೀನಪಡಿಸಿಕೊಂಡಿದ್ದಾರೆ.
ಪ್ರಕರಣದಲ್ಲಿ ಆರೋಪಿ ಮತ್ತು ಸೊತ್ತು ಪತ್ತೆಯ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕ ಮಂಜಪ್ಪ ಡಿ.ಆರ್. ನೇತೃತ್ವದ, ಪಿಎಸ್ಐ ಪುನೀತ್ ಕುಮಾರ್ ಬಿ.ಇ, ಈರಣ್ಣ ಶಿರಗುಂಪಿ, ಭರತೇಶ್ ಕಂಕಣವಾಡಿ ಹಾಗೂ ಎಎಸ್ಐ ವಿಜಯ್, ಸಿಬ್ಬಂದಿಯವರಾದ ಸತೀಶ್, ನೇತ್ರಾವತಿ, ಕಿರಣ್, ಆನಂದ, ಒಬಳೇಶ್ ಹಾಗೂ ಶಿವಕುಮಾರ್ ರವರನ್ನು ಒಳಗೊಂಡ ವಿಶೇಷ ತಂಡ ಶ್ರಮಿಸಿತ್ತು.