ಕುಂದಾಪುರ, ಎ18(Daijiworld News/SS): ಕಳೆದ ಮೂರು ವಾರಗಳ ಹಿಂದೆ ಕುಂದಾಪುರದ ಗೋಳಿಯಂಗಡಿ ಸಮೀಪ ಅಪಘಾತಕ್ಕೀಡಾಗಿ ಕಾಲಿಗೆ ಬಿದ್ದ ಬಲವಾದ ಪೆಟ್ಟಿನಿಂದ ಮಗ್ಗುಲನ್ನು ಸಹ ಬಲಿಸಲು ಆಗದ ಸ್ಥಿತಿಯಲ್ಲಿರುವ ಉಳ್ತೂರಿನ ಜಯಶೀಲ ಪೂಜಾರಿ ತಮ್ಮ ಮತ ಚಲಾಯಿಸಿ ಎಲ್ಲರಿಗೂ ಮಾದರಿಯಾಗಿದ್ದಾರೆ.
ಜಯಶೀಲ ಪೂಜಾರಿ ಸ್ಟ್ರೆಕ್ಚರ್ನಲ್ಲೇ ಬಂದು ತಮ್ಮ ಮತ ಚಲಾಯಿಸಿದ್ದಾರೆ. ಪೂಜಾರಿ ಅವರು ಮಗ್ಗುಲನ್ನು ಸಹ ಬಳಸಲು ಆಗದ ಸ್ಥಿತಿಯಲ್ಲಿದ್ದರೂ ಮಂಜಾನೆ 11:00 ಗಂಟೆಗೆ ಮೊದಲೇ ತಮ್ಮ ಮತ ಚಲಾಯಿಸಿ ಎಲ್ಲಾ ಮತದಾರ ಪ್ರಭುಗಳಿಗೆ ಪ್ರೇರಣೆಯಾಗಿದ್ದಾರೆ.
ಲೋಕಸಭಾ ಚುನಾವಣೆಗೆ ಮತದಾನ ಮಾಡುವಂತೆ ಚುನಾವಣಾ ಆಯೋಗ ಸೇರಿದಂತೆ ಆಯಾ ಜಿಲ್ಲಾಡಳಿತ ಮತದಾನ ಜಾಗೃತಿ ಅಭಿಯಾನ ನಡೆಸಿವೆ. ಮತದಾನದ ಮಹತ್ವವನ್ನು ಜನರಿಗೆ ಮನಮುಟ್ಟುವಂತೆ ತಿಳಿಸಿವೆ. ಈ ನಡುವೆ ಕರಾವಳಿ ಜಿಲ್ಲೆಗಳಲ್ಲಿ ಮತದಾನದ ಮಹತ್ವವನ್ನು ಎಲ್ಲಾ ರೀತಿಯಲ್ಲೂ ಸಾರುವಂತೆ ಚಿತ್ರಣ ಕಂಡುಬಂದಿದೆ.