ಕಾಪು,ಏ 18 (Daijiworld News/MSP): 2019 ರ ಲೋಕಸಭಾ ಚುನಾವಣೆ ಸಂದರ್ಭಕಾಪು ಕ್ಷೇತ್ರದ ಹೆಜಮಾಡಿ, ಪಡುಬಿದ್ರಿ ,ಕಂಚಿನಡ್ಕ ,ಅದಮಾರು ಮುಂತಾದ ಚುನಾವಣಾ ಕೇಂದ್ರಗಳಲ್ಲಿ ಬೆಳಿಗ್ಗೆ 7 ಗಂಟೆಯಿಂದ ಮದ್ಯಾಹ್ನ 12 ಗಂಟೆ ವರೇಗೆ ಸುಮಾರು 40 ಶೇಕಡಾ ಮತದಾನ ಆಗಿದೆ.
ಎಲ್ಲರೂ ಹುಮ್ಮಸ್ಸಿನಿಂದ ಮತಗಟ್ಟೆ ತೆರಳಿ ಸರತಿಯ ಸಾಲಿನಲ್ಲಿ ನಿಂತು ಮತ ಚಲಾಯಿಸುತಿದ್ದಾರೆ. ಎಲ್ಲೂ ಏನು ಅಹಿತಕರ ಘಟನೆ ಈ ವರೆಗೆ ನಡೆದಿಲ್ಲ. ಕಂಚಿನಡ್ಕ ಬೂತ್ ನಲ್ಲಿ ಮೊದಲು ಎರಡು ಮತ ಹಾಕಿದ ಮೇಲೆ ಇವಿಎಮ್ ಮೆಶೀನ್ ಕೈ ಕೊಟ್ಟು ಸ್ವಲ್ಪ ತೊಂದರೆಯಾಗಿತ್ತು. ಚುನಾವಣಾಧಿಕಾರಿಗಳು ಅರ್ಧ ಗಂಟೆಯೊಳಗೆ ಇವಿಎಮ್ ಮೆಶೀನ್ ಬದಲಾಯಿಸಿ ಮತಹಾಕಲು ಸೌಕರ್ಯ ಮಾಡಿದ್ದಾರೆ. ಎಲ್ಲರೂ ಈ ಬಾರಿ ಹುಮ್ಮಸ್ಸಿನಿಂದ ಮತಗಟ್ಟೆಗೆ ಬರುವುದು ನೋಡಿದರೆ ಅತಿ ಹೆಚ್ಚು ಮತದಾನ ಆಗುವ ನಿರೀಕ್ಷೆ ಇದೆ.