ಕಾಸರಗೋಡು, ಡಿ 07 (DaijiworldNews/PC): ಮಹಿಳೆಯರೂ ಪುರುಷರಷ್ಟೇ ಸಮಾನರು ಎಂಬಂತೆ ಇಲ್ಲಿ ಮೂವರು ಮಹಿಳೆಯರು ಸೇರಿ ಟೂ ವಿಲ್ಲರ್ ಗ್ಯಾರೇಜ್ ಒಂದನ್ನು ಪ್ರಾರಂಭಿಸಿದ್ದು ಇವರ ಕಾರ್ಯಕ್ಕೆ ಎಲ್ಲೆಡೆಯಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ.
ಮೂಲತಃ ಕಾಸರಗೋಡಿನವರಾದ ಮೂವರು ಪ್ರಾರಂಭಿಸಿದ ಈ ಗ್ಯಾರೇಜ್ ಕೇರಳದ ಮೊಟ್ಟ ಮೊದಲ ಬಾರಿಗೆ ಮಹಿಳೆಯರೇ ಮುನ್ನಡೆಸುತ್ತಿರುವ ಗ್ಯಾರೇಜ್ ಆಗಿದೆ.
ಬಿನ್ಸಿ, ಮರ್ಸಿ, ಬಿಂಟು ಎಂಬ ಮೂವರು ಮಹಿಳೆಯರು ಸೇರಿಕೊಂಡು ಈ ಗ್ಯಾರೇಜ್ ಪ್ರಾರಂಭಿಸಿದ್ದು. ಕೇರಳ ಸರಕಾರದ ಕುಟುಂಬ ಶ್ರೀ ಯೋಜನೆಯಡಿ ದ್ವಿಚಕ್ರ ವಾಹನದ ತರಬೇತಿಯನ್ನು ಪಡೆದ ಇವರು ಸ್ವಂತ ಗ್ಯಾರೇಜ್ ಅನ್ನು ಆರಂಭಿಸಿದ್ದಾರೆ.
ತಾವೇ ಸ್ಥಾಪಿಸಿರುವ ಈ ಗ್ಯಾರೇಜ್ ಬಗ್ಗೆ ಮಾತನಾಡಿದ ಬಿನ್ಸಿ ಇಂತಹದೊಂದು ಕನಸು ನಮ್ಮಲ್ಲಿತ್ತ್ತುಈ ಕನಸನ್ನು ಈಡೇರಿಸಿಕೊಂಡ ಬಗ್ಗೆ ನಮ್ಮಲ್ಲಿ ಹೆಮ್ಮೆ ಇದೆ. ಈ ಮೂಲಕ ಪುರುಷನಿಗಿಂತ ಕಮ್ಮಿಇಲ್ಲ ಎಂದು ತೋರಿಸಿದ್ದೇವೆ ಎಂದಿದ್ದಾರೆ.