ಮಂಗಳೂರು, ಎ18(Daijiworld News/SS): ನಗರದಲ್ಲಿ ಸೀಮಂತ ಕಾರ್ಯಕ್ರಮ ನಡೆಯುವ ಮುನ್ನ ತುಂಬು ಗರ್ಭಿಣಿಯೊಬ್ಬರು ಮತ ಚಲಾಯಿಸಿ ಎಲ್ಲರಿಗೂ ಮಾದರಿಯಾಗಿದ್ದಾರೆ.
ಮುಗರೋಡಿಯ ಕಾವ್ಯ ಸಂಜೀವ ಮತ ಚಲಾಯಿಸಿದ ತುಂಬು ಗರ್ಭಿಣಿ.
ಇವರು ಕೊಂಚಾಡಿಯ ಶ್ರೀರಾಮಾಶ್ರಮ ಶಾಲೆಯಲ್ಲಿ ಮತದಾನ ಮಾಡಿದ್ದು, ತಮ್ಮ ಸೀಮಂತದ ವಿಧಿ ವಿಧಾನಗಳಿಗೆ ತೆರಳುವ ಮುನ್ನ ತಮ್ಮ ಹಕ್ಕನ್ನು ಚಲಾಯಿಸಿಯೇ ತೆರಳಿದ್ದಾರೆ. ಈ ಮೂಲಕ ಪ್ರತಿಯೊಬ್ಬರೂ ಕೂಡ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಿ ಎಂದು ಸಂದೇಶ ನೀಡಿದ್ದಾರೆ.
ಪ್ರಜಾಪ್ರಭುತ್ವದ ಹಬ್ಬ, ಭವಿಷ್ಯಕ್ಕಾಗಿ ಪ್ರಜೆಗಳು ತಮ್ಮ ಪವರ್ ತೋರಿಸುವ ಅವಕಾಶ ಬಂದಿದೆ. ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಮತಗಟ್ಟೆಗಳಲ್ಲಿ ಬಹಳ ಉತ್ಸಾಹದಿಂದ ಮತದಾರ ಪ್ರಭುಗಳು ಮತದಾನ ಮಾಡುತ್ತಿದ್ದಾರೆ. ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಮತದಾನ ಪ್ರಕ್ರಿಯೆ ನಡೆಯಲಿದೆ.