ಕಾರ್ಕಳ, ಡಿ 06 (DaijiworldNews/MS): :ಕಾರ್ಕಳದ ಇತಿಹಾಸ ಪ್ರಸಿದ್ಧವಾಗಿರುವ ರಾಮಸಮುದ್ರ ಕೆರೆಯಲ್ಲಿ ತನ್ನ ಗೆಳೆಯರೊಂದಿಗೆ ಮೀನು ಹಿಡಿಯಲು ಹೋಗಿದ್ದ ನಿತಿನ್ ಎಂಬ ಯುವಕ ತನ್ನ ಕತ್ತಿನಲ್ಲಿದ್ದ ಬೆಲೆಬಾಳುವ ಚಿನ್ನದ ಸರವನ್ನು ಕಳೆದುಕೊಂಡಿದ್ದರು.
ನಿಂತ ನೀರಿನಿಂದಾಗಿ ಕೆಸರು ತುಂಬಿಕೊಂಡಿದ್ದ ಕೆರೆಯಲ್ಲಿ ಸತತ 2 ದಿನ ಹುಡುಕಾಡಿದರೂ ಸರ ಸಿಕ್ಕಿರಲಿಲ್ಲ. ಕರೆ ಮೂಲಕ ವಿಚಾರ ತಿಳಿದ ಆಪತ್ಭಾಂಧವ ಈಶ್ವರ್ ಮಲ್ಪೆ ಮತ್ತು ತಂಡ ಸ್ಥಳಕ್ಕೆ ಧಾವಿಸಿತು.
ಸ್ಥಳೀಯ ದೈವ ದೇವರಿಗೆ ಹಾಗೂ ಕೊಲ್ಲೂರು ಶ್ರೀ ಮೂಕಾಂಬಿಕೆ ತಾಯಿಗೆ ಕೈ ಮುಗಿದು ಬೇಡಿಕೊಂಡು ಕೆರೆಗಿಳಿದ ಆಪತ್ಭಾಂಧವ ಈಶ್ವರ್ ಮಲ್ಪೆ ಕೇವಲ 15 ನಿಮಿಷದ ಅಂತರದಲ್ಲಿ ಹುಡುಕಾಡಿ ಸುಮಾರು 2 ಲಕ್ಷ ಮೌಲ್ಯದ ಚಿನ್ನದ ಸರವನ್ನು ಮೇಲೆತ್ತಿ ವಾರಿಸುದಾರರಿಗೊಪ್ಪಿಸಿ ಮಾನವೀಯತೆ ಮೆರೆದರು.