ಮಂಗಳೂರು, ಡಿ 04 (DaijiworldNews/MS): 2024ರ ವರ್ಷದಲ್ಲಿ ಹಜ್ ಯಾತ್ರೆಗೆ ಹೋಗಲು ಅರ್ಜಿ ಸಲ್ಲಿಸುವ ಪ್ರಕ್ರಿಯೆ ಡಿಸೆಂಬರ್ 4ರಿಂದ ಆರಂಭವಾಗಿದೆ.
ಭಾರತ ಸರಕಾರದ ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವಾಲಯದ 2023ರ ಹಜ್ ನೀತಿಯಂತೆ ಹಜ್ ಯಾತ್ರೆ ನಡೆಯಲಿದೆ. ಅರ್ಜಿಗಳನ್ನು ಆನ್ಲೈನ್ ಮೂಲಕ ಭಾರತೀಯ ಹಜ್ ಸಮಿತಿಯ ವೆಬ್ಸೈಟ್ hajcommittee.gov.in ಅಥವಾ ಮೊಬೈಲ್ ಆ್ಯಪ್ “HAJ SUVIDHA” ದಲ್ಲಿ ಭರ್ತಿ ಮಾಡಿ ಸಲ್ಲಿಸಬಹುದಾಗಿದೆ.
ಅರ್ಜಿ ಸಲ್ಲಿಸುವ ಮೊದಲು ನಿಯಮಗಳನ್ನು ಜಾಗರೂಕತೆಯಿಂದ ಓದಿ ಬಳಿಕ ಅರ್ಜಿಗಳನ್ನು ಭರ್ತಿ ಮಾಡಬೇಕು. ಅರ್ಜಿದಾರರು 2025ರ ಜನವರಿ 31ರ ವರೆಗೆ ಅವಧಿ ಇರುವ ಪಾಸ್ಪೋರ್ಟ್ ಹೊಂದಿರಬೇಕು. ಅರ್ಜಿ ಸಲ್ಲಿಕೆಗೆ ಡಿಸೆಂಬರ್ 20 ಕೊನೆಯ ದಿನವಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಅಬ್ದುಲ್ ನಾಸೀರ್ ಲಕ್ಕಿಸ್ಟಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.