ಪುತ್ತೂರು, ಎ18(Daijiworld News/SS): ಹತ್ತೂರ ಒಡೆಯ ಮಹತೋಭಾರ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಬ್ರಹ್ಮರಥೋತ್ಸವ ಮತ್ತು ಪುತ್ತೂರು ಬೆಡಿ ವಿಜೃಂಭಣೆಯಿಂದ ಸಂಪನ್ನಗೊಂಡಿತು.
ಬ್ರಹ್ಮರಥೋತ್ಸವ ಪೂರ್ವಭಾವಿಯಾಗಿ ಬೆಳಗ್ಗೆ ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ದೇವರ ದರ್ಶನ ಬಲಿ ಮತ್ತು ಬಟ್ಟಲು ಕಾಣಿಕೆ ಸಮರ್ಪಣೆ ಕಾರ್ಯಕ್ರಮ ನಡೆಯಿತು. ಅಪಾರ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು.
ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಬ್ರಹ್ಮರಥ ಪತಾಕೆ, ಅಷ್ಟ ದಿಕ್ಪಾಲಕರು, ಶಿಖರ ಕಲಶ, ಶ್ವೇತ ಚಕ್ರ ಮತ್ತು ಸತ್ತಿಗೆ ಅಳವಡಿಸಿದ 70 ಅಡಿ ಎತ್ತರದ ಬ್ರಹ್ಮರಥದಲ್ಲಿ ದೇವರು ವಿರಾಜನರಾದರು. ಬ್ರಹ್ಮರಥೋತ್ಸವಕ್ಕೆ ಕ್ಷಣಗಣನೆ ಆರಂಭಕ್ಕೂ ಮುನ್ನ ಬ್ರಹ್ಮರಥೋತ್ಸವದ ಪ್ರಮುಖ ಆಕರ್ಷಣೆ ಪುತ್ತೂರ ಬೆಡಿ ಕಾರ್ಯಕ್ರಮ ನಡೆಯಿತು
ದೇವಾಲಯದ ಎದುರುಗದ್ದೆಯಲ್ಲಿ ನಡೆಯುವ ಪುತ್ತೂರ ಬೆಡಿ-ಸುಡುಮದ್ದು ವೀಕ್ಷಣೆಗಾಗಿ ಈ ಬಾರಿ 2 ಲಕ್ಷಕ್ಕೂ ಅಧಿಕ ಜನ ಸೇರಿದ್ದರು. 1 ಗಂಟೆಗೂ ಅಧಿಕ ಸಮಯ ಬಣ್ಣಬಣ್ಣದ ಸುಡುಮದ್ದು ಪ್ರದರ್ಶನ ನಡೆಯಿತು.
ಸುಡುಮದ್ದು ಪ್ರದರ್ಶನದ ನಂತರ ಚೆಂಡೆ ಮೇಳ, ಮಂಗಳವಾದ್ಯ, ಬ್ಯಾಂಡ್ ವಾಲಗ, ಶಂಖ ಜಾಗಟೆ, ಮಂಗಳಕರ ನಿನಾದ ಹಿನ್ನೆಲೆಯಲ್ಲಿ ಬ್ರಹ್ಮರಥಾರೂಢರಾದ ಶ್ರೀ ಮಹಾಲಿಂಗೇಶ್ವರ ಬ್ರಹ್ಮರಥವನ್ನು 400 ಮೀ.ಉದ್ದಕ್ಕೆ ಭಕ್ತರ