ಸುರತ್ಕಲ್, ಡಿ 04 (DaijiworldNews/MS): ಬೆಳ್ತಂಗಡಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಭೂ ಮಾಪನಾಧಿಕಾರಿಯನ್ನು ಜಿಲ್ಲಾಧಿಕಾರಿ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.
ಬೆಳ್ತಂಗಡಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಭೂ ಮಾಪನಾಧಿಕಾರಿ ನಿಝಾಮ್ ಅಮಾನತುಗೊಂಡ ಅಧಿಕಾರಿ.
ನಿಝಾಮ್ ಸುರತ್ಕಲ್ ವಲಯ ಭೂ ಮಾಪನಾಧಿಕಾರಿಯಾಗಿದ್ದ ಸಂದರ್ಭ , ಕಾನ ಕಟ್ಲ ಜನತಾ ಕಾಲನಿಯ ದ.ಕ. ಜಿ.ಪಂ. ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತ್ತು ಆಟದ ಮೈದಾನವಿರುವ ಭೂಮಿಯನ್ನು ಅಳೆತ ಮಾಡಿ ಖಾಸಗಿ ನಿವೇಶನ ಎಂದು ಜಮೀನಿನ ಮಾಲಕರಿಗೆ ಪ್ರಾಪರ್ಟಿ ಕಾರ್ಡ್ನೀಡಿದ್ದರು.
ಆರ್ ಟೀಸಿ ಹಾಗೂ ಇಲಾಖೆಯ ಎಫ್ಎಂಬಿ ನಕ್ಷೆಯನ್ನು ಪಡೆದುಕೊಂಡು ಕಾನೂನು ಪ್ರಕಾರವಾಗಿಯೇ ಸರ್ವೆ ಆಗಿದೆಯಾದರೂ ಭೂಮಾಪನಾಧಿಕಾರಿ ತಲೆದಂಡವಾಗಿದೆ. ಶಿಕ್ಷಣ ಇಲಾಖೆಗೆ ಮೀಸಲಿರಿಸಲಾದ 1.60 ಎಕರೆ ಭೂಮಿಯಲ್ಲಿ ಅಲ್ಪಭಾಗದಷ್ಟು ಜಮೀನು ವಸತಿ ರಹಿತರಿಗೆ ಮತ್ತು ನಗರಾಭಿವೃದ್ಧಿ ಇಲಾಖೆಯಡಿ ಬರುವ ಮಂಗಳೂರು ಮಹಾನಗರ ಪಾಲಿಕೆಯ ಆಶ್ರಯ ನಿವೇಶನ ಕಟ್ಟಲು ಬಳಕೆಯಾಗಿದೆ.