ಉಡುಪಿ, ಎ18(Daijiworld News/SS): ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ರಾಮನವಮಿ ಪ್ರಯುಕ್ತ ಮಾಡಿರುವ ಟ್ವೀಟ್ನಲ್ಲಿ ಮಾದರಿ ನೀತಿಸಂಹಿತೆ ಉಲ್ಲಂಘನೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಅವರ ವಿರುದ್ಧ ಪ್ರಕರಣ ದಾಖಲಾಗಿದೆ.
ರಾಮನವಮಿಯ ಶುಭಾಶಯ ಕೋರುವಾಗ ಶ್ರೀರಾಮನು ಬಾಣ ಬಿಡುತ್ತಿದ್ದು, ಬಾಣದಲ್ಲಿ ಮೋದಿ ಯವರ ಚಿತ್ರವಿತ್ತು. ಬಾಣ ರಾವಣನ ದಶಮುಖಗಳಿರುವ ವಿಪಕ್ಷಗಳ ಮುಖಂಡರ ಮುಖಗಳ ಭಾವಚಿತ್ರಕ್ಕೆ ಗುರಿ ಮಾಡುವಂತೆ ಚಿತ್ರಿಸಲಾಗಿತ್ತು. ಈ ಮೂಲಕ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುವಂತೆ ನೀತಿಸಂಹಿತೆ ಉಲ್ಲಂಘನೆ ಮಾಡಲಾಗಿದೆ ಎಂದು ಚುನಾವಣಾಧಿಕಾರಿಗಳು ದೂರು ನೀಡಿದ್ದಾರೆ.
ಈ ದೂರಿನಂತೆ ಉಡುಪಿ ನಗರ ಠಾಣೆಯಲ್ಲಿ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ವಿರುದ್ಧ ಪ್ರಕರಣ ದಾಖಲಾಗಿದೆ.