ಸುಳ್ಯ, ಡಿ 03 (DaijiworldNews/MS): ಬಿಜೆಪಿ ಯುವ ಮೋರ್ಚಾ ನಾಯಕ ಪ್ರವೀಣ್ ನೆಟ್ಟಾರ್ ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುವ ಓರ್ವ ಆರೋಪಿಗೆ ಎರಡು ದಿನಗಳ ಪೆರೋಲ್ ದೊರಕಿದೆ.
ಹತ್ಯೆಯಾದ ಪ್ರವೀಣ್
ಸುಳ್ಯ ಮೂಲದ ಇಬ್ರಾಹಿಂ ಶಾ ನಾವೂರು ಎಂಬಾತನನ್ನು ಪ್ರವೀಣ್ ಹತ್ಯೆ ಪ್ರಕರಣದಲ್ಲಿ 15ನೇ ಆರೋಪಿಯಾಗಿ ಪೊಲೀಸರುಬಂಧಿಸಿದ್ದರು. ಸುಳ್ಯದಲ್ಲಿ ಆತನ ತಂಗಿಯ ಮದುವೆ ಹಿನ್ನೆಲೆಯಲ್ಲಿ ಎರಡು ದಿನಗಳ ಜಾಮೀನು ದೊರೆತಿದೆ
ಮೈಸೂರು ಜೈಲಿನಲ್ಲಿದ್ದ ಈತನನ್ನು ಶನಿವಾರ ಬೆಳಗ್ಗೆ ಪೊಲೀಸ್ ಭದ್ರತೆಯಲ್ಲಿ ವಿವಾಹ ಸಮಾರಂಭದ ಸ್ಥಳಕ್ಕೆ ಕರೆತರಲಾಗಿದೆ. ಜಾಮೀನು ಅವಧಿ ಮುಗಿದ ಬಳಿಕ ಮತ್ತೆ ಜೈಲು ಸೇರಬೇಕಿದೆ.
2022 ಜುಲೈ 26ರಂದು ಪ್ರವೀಣ್ ನೆಟ್ಟಾರ್ ಅವರ ಬೆಳ್ಳಾರೆಯಲ್ಲಿದ್ದ ತನ್ನ ಚಿಕನ್ ಶಾಪ್ ಎದುರೇ ದುಷ್ಕರ್ಮಿಗಳು ಪ್ರವೀಣ್ ನೆಟ್ಟಾರ್ ಮೇಲೆ ದಾಳಿ ನಡೆಸಿ ಹತ್ಯೆ ಮಾಡಿದ್ದರು. ಪ್ರಕರಣಕ್ಕೆ ಸಂಬಂಧಪಟ್ಟಂ ತೆ ಎನ್ಐಎ (ರಾಷ್ಟ್ರೀಯ ತನಿಖಾ ದಳ) ಹಲವರನ್ನು ಬಂಧಿಸಿತ್ತು .ಈಗಲೂ ಕೆಲವು ಆರೋಪಿಗಳಿಗಾಗಿ ಎನ್ಐಎ ಶೋಧ ನಡೆಸುತ್ತಿದೆ.