ಮಂಗಳೂರು, ಡಿ 2 (DaijiworldNews/HR): ಬೆಂಗಳೂರಿನ ಟ್ರಾವೆಲ್ ಬಡ್ಡಿ ಹೆಸರಿನ ಸಂಸ್ಥೆಯ ಹೆಸರಲ್ಲಿ ದೈವದ ಕೋಲವನ್ನೇ ಮುಂದಿಟ್ಟು ಟೂರ್ ಪ್ಯಾಕೇಜ್ ಆಯೋಜಿಸಲಾಗಿದ್ದು, ಅದರ ಪೋಸ್ಟ್ ಅನ್ನು ಜಾಲತಾಣದಲ್ಲಿ ಹಾಕಲಾಗಿದ್ದು ಇದೀಗ ಈ ಪೋಸ್ಟ್ ವಿರುದ್ದ ಆಕ್ರೋಶ ವ್ಯಕ್ತವಾಗಿದೆ.
ಟ್ರಾವೆಲ್ ಬಡ್ಡಿ ಎಂಬ ಟ್ರಾವೆಲ್ ಸಂಸ್ಥೆಯಿಂದ 2024ರ ಫೆಬ್ರವರಿ 10-11ರಂದು ಎರಡು ದಿನದ ಟೂರ್ ಪ್ಯಾಕೇಜ್ ಹಮ್ಮಿಕೊಳ್ಳಲಾಗಿದ್ದು, ಉಪ್ಪಿನಂಗಡಿ ಕಂಬಳ, ನದಿಯಲ್ಲಿ ಬೋಟಿಂಗ್, ಬೊಳ್ಳಾಡಿ ಫಾರ್ಮ್ ನಲ್ಲಿ ಪಾರ್ಟಿ, ಬೊಳ್ಳಾಡಿ ಮನೆಯಲ್ಲಿ ಭೂತ ಕೋಲ, ಬೀರಮಲೆ ಬೆಟ್ಟಕ್ಕೆ ಟ್ರಕ್ಕಿಂಗ್ ಇರಲಿದೆ ಎಂದು ಪೋಸ್ಟ್ ನಲ್ಲಿ ಹೇಳಲಾಗಿದೆ.
ಇನ್ನು ಟೂರ್ ಪ್ಯಾಕೇಜ್ ಮೊತ್ತ ಒಬ್ಬನಿಗೆ 2899 ರೂ. ಆಗಿರುತ್ತದೆ. ಕೂಡಲೇ ಬುಕ್ಕಿಂಗ್ ಮಾಡಿ ಎಂದು ಎಡ್ರಸ್ ಬುಕ್ ಮೈ ಶೋ ಎಡ್ರಸ್ ಹಾಕಲಾಗಿದ್ದು, ದೈವದ ಕೋಲದ ಚಿತ್ರವನ್ನು ಹಾಕಲಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ದೈವ ಕೋಲವನ್ನು ಮಾರ್ಕೆಟ್ ಮಾಡುವ ಮತ್ತು ವ್ಯವಹಾರದ ಉದ್ದೇಶದಿಂದ ಟೂರ್ ಪ್ಯಾಕೇಜ್ ಘೋಷಿಸಿರುವುದಕ್ಕೆ ಭಾರೀ ಆಕ್ರೋಶ ವ್ಯಕ್ತವಾಗಿದೆ.