ಮಂಗಳೂರು, ಡಿ 01 (DaijiworldNews/AK): ನ. 19 ರಂದು ಖಾಸಗಿ ಬಸ್ಸಿನಲ್ಲಿ ಮಹಿಳೆ ಒಬ್ಬರು ಪ್ರಯಾಣ ಮಾಡುವ ವೇಳೆ ಸುಮಾರು 50,000 ರೂ. ಮೌಲ್ಯದ ಆಭರಣ ಮತ್ತು ಇತರೆ ಮೌಲ್ಯದ ವಸ್ತುಗಳು ಇರುವ ಬ್ಯಾಗನ್ನು ಬಿಟ್ಟು ಹೋಗಿದ್ದ ಘಟನೆ ನಡೆದಿದೆ.
ಇದನ್ನು ನೋಡಿದ ಬಸ್ಸಿನ ನಿರ್ವಾಹಕ ಆದ ಜಯರಾಜ್ ಕಾರಾವಿ ಎಂಬವರು ಬ್ಯಾಗನ್ನು ಮತ್ತು ಅದರೊಳಗಿನ ಆಭರಣ ಮತ್ತು ವಸ್ತುಗಳ ನ್ನು ನ.20 ರಂದು ವಾರಸುದಾರರಿಗೆ ಹಿಂದುರುಗಿಸಿದ್ದಾರೆ.
ಮಂಗಳೂರು ದಕ್ಷಿಣ ಠಾಣಾ ASI ಶ್ರೀಧರ ರವರ ಮುಖಾಂತರ ಮಾಲೀಕರಿಗೆ ಯಥಾವತ್ತಾಗಿ ಮುಟ್ಟಿಸಿ ತಮ್ಮ ಪ್ರಾಮಾಣಿಕತೆ ಮೆರೆದಿದ್ದಾರೆ.
ಈ ಬಗ್ಗೆ ಇಂದು ಡಿ.1 ರಂದು ನಿರ್ವಾಹಕ ಜಯರಾಜ್ ರವರ ಪ್ರಾಮಾಣಿಕತೆ ಶ್ಲಾಘಿಸಿ ಸಹಾಯಕ ಪೊಲೀಸ್ ಆಯುಕ್ತರು ಕೇಂದ್ರ ಉಪ ವಿಭಾಗ ಶ್ರೀ ಮಹೇಶ್ ಕುಮಾರ್ ರವರು ಮಂಗಳೂರು ದಕ್ಷಿಣ ಪೊಲೀಸ್ ಠಾಣೆ ಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು.