ಮಂಗಳೂರು,ಡಿ 01 (DaijiworldNews/MS): 30 ವರ್ಷಗಳಿಂದ ಕೈತಪ್ಪಿದ ದ.ಕ ಜಿಲ್ಲಾ ಲೋಕಸಭಾ ಕ್ಷೇತ್ರಕ್ಕೆ ಹೊಸ ಪ್ರಯೋಗ ನಡೆಸಲು ಜಿಲ್ಲಾ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಸಿದ್ಧತೆ ನಡೆಸಿದ್ದು, ಈ ಬಗ್ಗೆ ಡಿ.2 ( ನಾಳೆ) ಲೋಕಸಭಾ ಚುನಾವಣೆಯ ಜಿಲ್ಲಾ ಉಸ್ತುವಾರಿ ವಹಿಸಿಕೊಂಡಿರುವ ಸಚಿವ ಮಧು ಬಂಗಾರಪ್ಪ ಮಂಗಳೂರು ಭೇಟಿ ಸಂದರ್ಭದಲ್ಲಿ ಗಮನಹರಿಸಲು ಮುಂದಾಗಿದ್ದಾರೆ.
ಹಳೆ ಹುಲಿ ಬಂಟ್ವಾಳದ ರಮಾನಾಥ್ ರೈ, ಮುಸ್ಲಿಂ ಆದರೆ ಇನಾಯತ್ ಆಲಿ ಇಬ್ಬರ ಹೆಸರುಗಳು ಮೇಲ್ಪಂಕ್ತಿಯಲ್ಲಿದ್ದರೆ, ಹೀಗೆ ಹಲವರ ಹೆಸರುಗಳು ಚಾಲ್ತಿಯಲ್ಲಿದೆ. ಈ ಕುರಿತು ಹಲವು ಸಂದೇಶಗಳನ್ನು ಕಾಂಗ್ರೆಸ್ ಕಾರ್ಯಕರ್ತರು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದಾರೆ. ವಿಧಾನಪರಿಷತ್ ಸದಸ್ಯ ಹರೀಶ್ ಕುಮಾರ್ ಆದೀತೋ ಎನ್ನುವ ಪ್ರಶ್ನೆ ಬರುತ್ತಿದೆ. ಈ ಕಡೆ ಮಂಜುನಾಥ ಭಂಡಾರಿ ಕೂಡಾ ಆಕಾಂಕ್ಷಿ ಎನ್ನಲಾಗಿದೆ.
ಈ ನಡುವೆ ಕಾರ್ಯಕರ್ತರಲ್ಲಿ, ಕಾಂಗ್ರೆಸ್ ಅಭಿಮಾನಿಗಳು ಹೊಸ ಮುಖ ಸೈದ್ಧಾಂತಿಕವಾಗಿ ಬಿಜೆಪಿಯನ್ನು ಹಿಗ್ಗಾ ಮುಗ್ಗ ತರಾಟೆ ತೆಗೆದುಕೊಳ್ಳುವ ಎಂ ಜಿ ಹೆಗಡೆ, ಮಾಜಿ ಮೇಯರ್ ಶಶಿಧರ್ ಹೆಗ್ಡೆ, ಮಹಿಳಾ ನಾಯಕಿಯಾಗಿ ದುಡಿದಿರುವ ಮಮತಾ ಗಟ್ಟಿ, ಕಾಂಗ್ರೆಸ್ ನ ಚಿಂತಕ, ಜಿಲ್ಲಾ ಪ್ರಚಾರಾಧ್ಯಕ್ಷ ಗೌಡ ಸಮುದಾಯದಲ್ಲಿ ಪ್ರಭಾವಿ ಭರತ್ ಮುಂಡೋಡಿ, ವಕೀಲ ಪದ್ಮರಾಜ, ಮಹಿಳಾ ನಾಯಕಿ ಪ್ರತಿಭಾ ಕುಳಾಯಿ ಹೀಗೆ ಹೊಸ ಹೊಸ ಹೆಸರುಗಳ ಕುರಿತು ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಜೋರಾಗಿ ನಡೆದಿದೆ. ಈ ಎಲ್ಲಾ ಗೊಂದಲಗಳ ನಡುವೆ ಇತ್ತ ಬಿಜೆಪಿಯಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ಅವರ ಸೀಟೇ ಗೊಂದಲದಲ್ಲಿದೆ. ಅರುಣ್ ಪುತ್ತಿಲ ಬಿಜೆಪಿಗೆ ಅಡ್ಡವಾಗಿ ನಿಲ್ಲುವ ಸಾಧ್ಯತೆಗಳೂ ಹೆಚ್ಚಿವೆ, ಜೊತೆಗೆ ಬ್ರಿಜೇಶ್ ಚೌಟ ಸ್ಪರ್ಧೆಯಲ್ಲಿದ್ದು, ಇಲ್ಲದಿದ್ದಲ್ಲಿ ಇವೆಲ್ಲ ಗೊಂದಲ ನಿವಾರಿಸಲು ವಿಧಾನಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಅಥವಾ ಬೇರೆ ಜಿಲ್ಲೆಯ ಮುಖಂಡರನ್ನು ನಿಲ್ಲಿಸುವ ಸಾಧ್ಯತೆಗಳೂ ಹೆಚ್ಚಿದೆ. ಇವೆಲ್ಲಾ ಗೊಂದಲಗಳ ನಡುವೆ ಕಾಂಗ್ರೆಸ್ಸಿಗೆ ಹೆಚ್ಚಿನ ಅವಕಾಶಗಳಿದ್ದು, ಪ್ರಖರ ಮಾತನಾಡುವವರು ಪಕ್ಷದಿಂದ ಪ್ರತಿನಿಧಿಸಿದಲ್ಲಿ ಗೆಲ್ಲುವ ಸಾಧ್ಯತೆಗಳು ಹೆಚ್ಚಿವೆ ಅನ್ನುವ ಅಭಿಪ್ರಾಯಗಳು ಯುವಕಾಂಗ್ರೆಸ್ ಕಾರ್ಯಕರ್ತರಿಂದ ಕೇಳಿಬಂದಿದೆ. ಆದರೆ ಈ ಬಾರಿಯೂ ಕೊನೆಯ 15 ದಿನಗಳಲ್ಲಿ ಅಭ್ಯರ್ಥಿ ಘೋಷಿಸಿದಲ್ಲಿ ಮತ್ತೆ 35 ವರ್ಷಕ್ಕೆ ಲೋಕಸಭೆಯಿಲ್ಲದೇ ಕಾಂಗ್ರೆಸ್ ಮುಂದುವರಿಯುವುದಲ್ಲಿ ಸಂಶಯವಿಲ್ಲ ಅನ್ನುವ ಚಿಂತನೆಗಳು ರಾಜಕೀಯ ವಲಯದಿಂದ ಎಬ್ಬಿವೆ.