ಉಡುಪಿ, ನ 29 (DaijiworldNews/MS): "ಪೊಲೀಸರಿಗೆ ದೈಹಿಕ ಸಾಮರ್ಥ್ಯ ಅತಿ ಮುಖ್ಯವಾಗಿದ್ದು, ಇಂತಹ ವಾರ್ಷಿಕ ಕ್ರೀಡಾಕೂಟಗಳು ಪೋಲಿಸರಿಗೆ ಸಹಾಯಕವಾಗಲಿವೆ" ಎಂದು ಉಡುಪಿ ಜಿಲ್ಲಾಧಿಕಾರಿ ಡಾಕ್ಟರ್ ವಿದ್ಯಾ ಕುಮಾರಿ ಹೇಳಿದರು.
ಅವರು ಉಡುಪಿ ಜಿಲ್ಲಾ ಪೋಲಿಸ್ ನ ವಾರ್ಷಿಕ ಪೋಲಿಸ್ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು. "ಕ್ರೀಡೆಯಲ್ಲಿ ಸೋಲು ಗೆಲುವಿಗಿಂತ ಕ್ರೀಡಾ ಸ್ಫೂರ್ತಿ ಯೊಂದಿಗೆ ಭಾಗವಹಿಸುವುದು ಮುಖ್ಯ. ಕ್ರೀಡೆಯನ್ನು ಸ್ಪರ್ಧಾ ಮನೋಭಾವದಿಂದ ಸ್ವೀಕರಿಸಬೇಕು. ಸೋಲು ಗೆಲುವನ್ನು ಮೀರಿ ಈ ಕ್ರಿಡಾಕೂಟದಲ್ಲಿ ಭಾಗವಹಿಸಿ ಕ್ರೀಡಾ ಸ್ಪೂರ್ತಿಯನ್ನು ಮೆರೆಯಿರಿ" ಎಂದರು.
ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಉಡುಪಿ ಜಿಲ್ಲಾ ಪಂಚಾಯತ್ ಸಿಇಒ ಪ್ರಸನ್ನ ಹೆಚ್ ಮಾತನಾಡಿ "ನಾವು ಕ್ರೀಡಾ ಚಟುವಟಿಕೆ ಯಲ್ಲಿ ಭಾಗವಹಿಸುವಾಗ ಕೇವಲ ಕ್ರೀಡೆಯ ಕುರಿತಾಗಿ ನಮ್ಮ ಮನಸ್ಸಿನಲ್ಲಿ ವಿಚಾರ ಗಳು ಇರುತ್ತವೆ. ಕ್ರೀಡೆ ನಮಗೆ ದೈಹಿಕ ಸಾಮರ್ಥ್ಯವನ್ನು ಹೆಚ್ಚಿಸಲು ಮತ್ತು ದೈಹಿಕ ಸಾಮರ್ಥ್ಯವನ್ನು ಕಾಪಾಡಿಕೊಳ್ಳಲು ಸಹಕಾರಿ. ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ನಾವು ಇಡೀ ದಿನ ಉತ್ಸಾಹದಿಂದ ನಮ್ಮ ಕಾರ್ಯಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ಸಾಧ್ಯವಾಗುತ್ತದೆ" ಎಂದರು.
ಉಡುಪಿ ಜಿಲ್ಲಾ ಪೋಲಿಸ್ ವರಿಷ್ಟಾದಿಕಾರಿ ಡಾಕ್ಟರ್ ಅರುಣ್ ಕೆ ಸ್ವಾಗತಿಸಿ, ಈ ಕ್ರೀಡಾಕೂಟವನ್ನು ಪೋಲಿಸರ ದೈಹಿಕ ಸಾಮರ್ಥ್ಯ ವನ್ನು ವೃದ್ದಿಸಲು ಮತ್ತು ಸದಾ ಕೆಲಸದ ಒತ್ತಡದಲ್ಲಿರುವ ಪೋಲಿಸರಿಗೆ ಸಾಮಾಜಿಕ ಒಳಗೊಳ್ಳುವಿಕೆ ಗಾಗಿ ಇದನ್ನು ಆಯೋಜಿಸಲಾಗುತ್ತಿದೆ ಎಂದರು.
ಎಪಿಸಿ ಜೀವನ್ ಕುಪ್ಪಯ್ಯ ಕ್ರೀಡಾ ಜ್ಯೋತಿಯನ್ನು ಮೈದಾನಕ್ಕೆ ತಂದರು. ಆರ್ ಎಸ್ ಐ ರವಿ ಪ್ರತಿಜ್ಞಾ ವಿದಿ ಬೋದಿಸಿದರು. ಹೆಚ್ಚುವರಿ ಪೋಲಿಸ್ ಅದೀಕ್ಷಕ ಎಸ್ ಟಿ ಸಿದ್ದಲಿಂಗಪ್ಪ ವಂದಿಸಿದರು. ಯೋಗೇಶ್ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು. ಡಿ ಎ ಆರ್, ಮಹಿಳಾ ವಿಭಾಗ, ಉಡುಪಿ, ಕುಂದಾಫುರ, ಕಾರ್ಕಳ ಉಪವಿಭಾಗದ ಪೋಲಿಸ್ ತಂಡಗಳು ಪಥಸಂಚಲನದಲ್ಲಿ ಭಾಗವಹಿಸಿದವು.