ಮಂಗಳೂರು, ನ 29 (DaijiworldNews/MS): ಬಾವಿಯೊಂದು ಕುಸಿದ ಘಟನೆ ಮಂಗಳೂರು ನೀರುಮಾರ್ಗ ಸಮೀಪದ ಮೆರ್ಲ ಪದವಿನಲ್ಲಿ ನಡೆದಿದೆ. ಮೇಲ ಪದವಿನ ನಿವಾಸಿಯಾಗಿರುವ ವಾಲ್ಟರ್ ಸಲ್ಡಾನಾ ಎಂಬವರ ಕೃಷಿಗೆ ಉಪಯೋಗುವಾಗುವ ಬಾವಿ ಕುಸಿತಗೊಂಡಿದೆ.
ರಾತ್ರಿ ಸುಮಾರು 9.30ರ ವೇಳೆಗೆ ಬಾವಿ ಏಕಾಏಕಿ ಕುಸಿತವಾಗಿದೆ ಎಂದು ಮನೆಯ ಮಾಲಕರು ಹೇಳಿದ್ದಾರೆ. ಸಲ್ಡಾನಾ ಅವರು ರಾತ್ರಿ 9 ಗಂಟೆಯ ವೇಳೆಗೆ ತೋಟದ ಪಂಪ್ ಸೆಡ್ ಗೆ ಬಂದು ಗದ್ದೆಗೆ ಬಿಡಲಾಗುತ್ತಿದ್ದ ನೀರನ್ನು ಬಂದ್ ಮಾಡಿ ಹೋಗಿದ್ದರು. ಮತ್ತೆ ಇಂದು ಬೆಳಗ್ಗೆ ಗದ್ದೆ ನೀರು ಬಿಡಲು ಬಂದಾಗ ಬಾವಿ ಕುಸಿದಿರುವ ವಿಚಾರ ಗಮನಕ್ಕೆ ಬಂದಿದೆ. ಸುಗ್ಗಿ ಬೇಸಾಯಕ್ಕೆ ಗದ್ದೆಯನ್ನು ಹದ ಮಾಡಿಕೊಂಡಿದ್ದು, ಬಾವಿ ಕುಸಿತವಾದ ಕಾರಣ ಇದೀಗ ಬೇಸಾಯಕ್ಕೆ ಸಮಸ್ಯೆಯಾಗಿದೆ. ಪಂಪ ಸೆಟ್ ಕೂಡ ಬಾವಿಗೆ ಒಳಗೆ ಬಿದ್ದಿದೆ. ಇದರಿಂದ ಸಾವಿರಾರು ರೂ. ನಷ್ಟ ಸಂಭವಿಸಿದೆ ಎಂದು ಮನೆ ಮಾಲಕ ವಾಲ್ಟರ್ ಸಲ್ಡಾನಾ ಬೇಸರಿಸಿಕೊಂಡಿದ್ದಾರೆ.