ಮಂಗಳೂರು, ನ 29 (DaijiworldNews/MS): ಮೆಸ್ಕಾಂನಲ್ಲಿ ಅಂತಿಮ ಹಂತದ ಡಾಟಾ ಮೈಗ್ರೆಷನ್ ಪ್ರಕ್ರಿಯೆ ನಡೆಯುತ್ತಿರುವ ಹಿನ್ನಲೆಯಲ್ಲಿ ನ.28 ಹಾಗೂ ನ.29ರಂದು ಗ್ರಾಮಾಂತರ ಭಾಗದ ಆನ್ ಲೈನ್ ಸೇವೆಯಲ್ಲಿ ವ್ಯತ್ಯಯವಾಗಲಿದೆ.
ಗ್ರಾಮಾಂತರ ಗ್ರಾಹಕರಿಗೆ 2 ದಿನ ನಗದು ಪಾವತಿ ಆನ್ ಲೈನ್ ಮೂಲಕ ಬಿಲ್ ಪಾವತಿ ಸೇವೆಗಳು ಲಭ್ಯವಿರುವುದಿಲ್ಲ. ಈ ಅವಧಿಯಲ್ಲಿ ಆನ್ ಲೈನ್ ಸೇವೆಗಳಾದ ಹೊಸ ವಿದ್ಯುತ್ ಸಂಪರ್ಕ, ಹೆಸರು/ ಲೋಡ್ ಬದಲಾವಣೆ, ನಗದು ಪಾವತಿ, ಆನ್ ಲೈನ್ ಮೂಲಕ ವಿದ್ಯುತ್ ಬಿಲ್ ಪಾವತಿಗಳು ಹಾಗೂ ಇತರ ಸೇವೆಗಳು ಲಭ್ಯವಿರುವುದಿಲ್ಲ.
ಮಾಹಿತಿ ತಂತ್ರಜ್ಞಾನ ಸೇವೆಗಳಿಗೆ ಸಂಬಂಧಿಸಿದ ತಂತ್ರಾಂಶಗಳು ಹಾಗೂ ಹಾರ್ಡ್ ವೇರ್ ಗಳನ್ನು ಉನ್ನತೀಕರಿಸುತ್ತಿರುವ ಹಿನ್ನೆಲೆಯಲ್ಲಿ ಸೇವೆ ಅಲಭ್ಯವಾಗಿದ್ದುಈ ಅವಧಿಯಲ್ಲಿ ವಿದ್ಯುತ್ ಸರಬರಾಜು ಸೇವೆಗಳಲ್ಲಿ ಯಾವುದೇ ವ್ಯತ್ಯಯ ವಿರುವುದಿಲ್ಲ.