ಉಡುಪಿ, ನ 28 (DaijiworldNews/HR): ಇತ್ತೀಚಿಗಷ್ಟೇ ಉಡುಪಿಯ ನೆಜಾರಿನಲ್ಲಿ ನಡೆದ ನಾಲ್ವರ ಕೊಲೆ ಪ್ರಕರಣದ ಕುಟುಂಬಕ್ಕೆ ಕರ್ನಾಟಕ ರಾಜ್ಯ ಅಲ್ಪಸಂಖ್ಯಾತ ಆಯೋಗ ಅಧ್ಯಕ್ಷ ರಾದ ಅಬ್ದುಲ್ ಅಜಿಮ್ ಮತ್ತು ಕಾರ್ಯದರ್ಶಿ ಸಲ್ಮಾ ಫೀರ್ದೊಸ್ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವಾನ ನೀಡಿದರು.
ಕುಟುಂಬದ ಸದಸ್ಯರಾದ ನೂರ್ ಮೊಹಮ್ಮದ್ ಮತ್ತು ಇತರ ಕುಟುಂಬ ಸದಸ್ಯರನ್ನು ಭೇಟಿ ಯಾದ ನಿಯೋಗವು ಘಟನೆಯ ಕುರಿತು ಸಂತಾಪ ವ್ಯಕ್ತಪಡಿಸಿ ಸರಕಾರದ ಮಟ್ಟದಲ್ಲಿ ಸೂಕ್ತ ಕಾನೂನು ಕ್ರಮ ವಹಿಸುವ ಬಗ್ಗೆ ಭರವಸೆ ನೀಡಿದರು.
ಈ ಸಂಧರ್ಭದಲ್ಲಿ ಮಾಧ್ಯಮವದರೊಂದಿಗೆ ಮಾತನಾಡಿದ ಕರ್ನಾಟಕ ಸರಕಾರ ಅಲ್ಪ ಸಂಖ್ಯಾತ ಆಯೋಗದ ಅಧ್ಯಕ್ಷ ರಾದ ಅಬ್ದುಲ್ ಅಜೀಮ್ ಮಾತನಾಡಿ "ಇಂದು ಕುಟುಂಬವನ್ನು ಭೇಟಿ ಮಾಡಿ ಘಟನೆಯ ಕುರಿತು ಸಾಂತ್ವಾನ ವ್ಯಕ್ತಪಡಿಸಿದ್ದೇನೆ. ಘಟನೆಯ ನಡೆದ ದಿನದಿಂದ ಪೋಲಿಸರೊಂದಿಗೆ ನಿರಂತರ ಸಂಪರ್ಕದಲ್ಲಿ ಇದ್ದೇನೆ. ಘಟನೆ ನಡೆದ ಸ್ಥಳವನ್ನು ಪರಿಶೀಲನೆ ಮಾಡಿದ್ದೇನೆ. ಐನಾಜ್ ದೇಹದ ಮೇಲೆ ೧೦-೧೫ ಬಾರಿ ಚೂರಿ ಇರಿದಿದ್ದಾನೆ. ಇದನ್ನು ಗಮನಿಸಿದರೆ ಆತನಿಗೆ ಎಷ್ಟು ದ್ವೇಷ, ಅಸೂಯೆ ಇತ್ತು ಎಂಬುವುದು ತಿಳಿಯುತ್ತದೆ.ಇದನ್ನು ಅಪರೂಪದ ಪ್ರಕರಣ ಎಂದು ಪರಿಗಣಿಸಬೇಕು. ಈ ಕುರಿತು ಪೋಲಿಸರು ತನಿಖೆ ನಡೆಸಬೇಕು. ಮಾತ್ರವಲ್ಲದೇ ಕುಟುಂಬದ ಸದಸ್ಯ ಮೃತ ಐನಾಜ್ ಸಹೋದರ ಅಸಾದ್ ಗೆ ಅನುಕಂಪದ ಆಧಾರದ ಮೇಲೆ ಪೋಲಿಸ್ ಸಬ್ ಇನ್ಸ್ಪೆಕ್ಟರ್ ಹುದ್ದೆಗೆ ಸರಕಾರ ನೇರ ನೇಮಕಾತಿ ಮಾಡಬೆಕು ಎಂದು ಸರಕಾರವನ್ನು ನಾನು ಆಗ್ರಹ ಮಾಡುತ್ತೆನೆ. ಈ ಪ್ರಕರಣ ವನ್ನು ಉಡುಪಿ ಪೋಲಿಸರು ಸೂಕ್ತ ವಾದ ರೀತಿಯಲ್ಲಿ ನಿರ್ವಹಿಸಿ ಆರೋಪಿಗೆ ಕಠಿಣ ಶಿಕ್ಷೆ ಆಗುವಂತೆ ಕ್ರಮ ವಹಿಸಬೇಕು" ಎಂದರು.
ಈ ಸಂಧರ್ಭದಲ್ಲಿ ನಾಯಕರಾದ ಎಂ ಎ ಗಫೂರ್, ಕುಟುಂಬದ ಸದಸ್ಯರಾದ ಅಶ್ರಫ್ ಮತ್ತು ಇತರರು ಉಪಸ್ಥಿತರಿದ್ದರು.