ಮಂಗಳೂರು, ಏ 17(Daijiworld News/MSP): ದಕ್ಷಿಣ ಕನ್ನಡ ಲೋಕಸಭೆ ಕ್ಷೇತ್ರಕ್ಕೆ ಗುರುವಾರ ನಡೆಯಲಿರುವ ಚುನಾವಣೆಗೆ ಜಿಲ್ಲಾಡಳಿತ ಸಂಪೂರ್ಣ ಸಜ್ಜಾಗಿದ್ದು, ಚುನಾವಣೆ ಕರ್ತವ್ಯಕ್ಕೆ ನಿಯೋಜನೆಗೊಂಡ ಸಿಬ್ಬಂದಿ ಬುಧವಾರ ಮತಗಟ್ಟೆಗೆ ತೆರಳಿದರು.
ನಗರದ ಉರ್ವ ಕೆನರಾ ಪ್ರೌಢಶಾಲೆ, ಪಾಂಡೇಶ್ವರ ರೊಸಾರಿಯೋ ಶಿಕ್ಷಣ ಸಂಸ್ಥೆ ಮಸ್ಟರಿಂಗ್ ಕೇಂದ್ರದಲ್ಲಿ ಸಿಬ್ಬಂದಿಗಳಿಗೆ ಮತಯಂತ್ರ ವಿತರಿಸಲಾಯಿತು.
ಬೆಳಗ್ಗೆ 9.30ಕ್ಕೆ ಮಸ್ಟರಿಂಗ್ ಕೇಂದ್ರದಲ್ಲಿ ಮತಗಟ್ಟೆ ಅಧಿಕಾರಿಗಳು ಹಾಗೂ ಇತರ ಸಿಬ್ಬಂದಿಗಳು ಹಾಜರಾಗಿ ತಮಗೆ ನೀಡಲಾದ ಮತಯಂತ್ರ, ಮತದಾರರ ಪಟ್ಟಿ ಇತರ ವಿವರಗಳನ್ನು ಪರಿಶೀಲಿಸಿ ತಮಗೆ ನಿಯೋಜಿಸಿದ ಮತಗಟ್ಟೆಯತ್ತ ತೆರಳಿದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು 1861, ಮತಯಂತ್ರದ 2236 ಕಂಟ್ರೋಲ್ ಯೂನಿಟ್ ಹಾಗೂ 2236 ಬ್ಯಾಲೆಟ್ ಯೂನಿಟ್ಗಳು ಹಾಗೂ 2495 ವಿವಿಪ್ಯಾಟ್ ಹಂಚಿಕೆಯಾಗಿದೆ.