ಉಡುಪಿ, ನ.27(DaijiworldNews/AK): ಮಣಿಪಾಲದ ಸಿಂಡಿಕೇಟ್ ಸರ್ಕಲ್ ಬಳಿ ಇರುವ ಉನ್ನತ ರೆಸಿಡೆನ್ಸಿಯ 101 ಮತ್ತು 102 ರಲ್ಲಿ ನ.೨೬ ರಂದು ವೇಶ್ಯಾವಾಟಿಕೆ ನಡೆಸುತ್ತಿದ್ದ ಮೂವರನ್ನು ಉಡುಪಿ ಪೋಲೀಸರು ಬಂಧಿಸಿ ಇಬರು ಸಂತ್ರಸ್ಥ ಮಹಿಳೆಯರನ್ನು ರಕ್ಷಿಸಿದ್ದಾರೆ.
ಆರೋಪಿಗಳಾದ ಗಣೇಶ್, ಸುಧೀರ್ ಮತ್ತು ಮಾರುತಿ ಎಂದು ಗುರುತಿಸಲಾಗಿದೆ.
ಜಯಾನಂದ .ಕೆ, ಪೊಲೀಸ್ ನಿರೀಕ್ಷಕರು, ಮಹಿಳಾ ಪೊಲೀಸ್ ಠಾಣೆಗೆ ಬಂದ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ವೇಶ್ಯವಾಟಿಕೆ ದಂಧೆ ನಡೆಸುತ್ತಿದ್ದ ಆರೋಪಿಗಳನ್ನು ದಸ್ತಗಿರಿ ಮಾಡಿ ಕೃತ್ಯಕ್ಕೆ ಸಂಬಂಧಿಸಿದ ಸ್ವತ್ತುಗಳನ್ನು ಸ್ವಾಧೀನಪಡಿಸಿಕೊಂಡು, ಇಬ್ಬರು ಸಂತ್ರಸ್ಥ ಮಹಿಳೆಯರನ್ನು ರಕ್ಷಿಸಿರುವುದಾಗಿದೆ ಎಂದು ತಿಳಿಸಿದರು.
ಈ ಬಗ್ಗೆ ಮಹಿಳಾ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 23/2023 ಕಲಂ: 370(ಎ)(2) ಐಪಿಸಿ ಮತ್ತು 3, 4, 5, 6 ಮತ್ತು 7 Immoral Traffic ( Prevention) Act 1956 ರಂತೆ ಪ್ರಕರಣ ದಾಖಲಿಸಲಾಗಿದೆ.