ಮಂಗಳೂರು, ನ 24 (DaijiworldNews/PC): ಸಾಮಾನ್ಯ ವಾಗಿ ಭ್ರಷ್ಟಾಚಾರವನ್ನು ತಡೆಗಟ್ಟಬೇಕು ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಾಣ ಮಾಡಬೇಕು ಎಂಬುದು ಕೇವಲ ಭಾಷಣಗಳಿಗೆ ಸೀಮಿತವಾಗಿದೆ ಹೊರತು ಎಲ್ಲರೂ ಇದನ್ನು ಪಾಲಿಸುತ್ತಿಲ್ಲ. ತನ್ನ ಅಜ್ಜನ ಮರಣ ಪ್ರಮಾಣ ಪತ್ರವನ್ನು ಕೇಳಲು ಬಂದ ವ್ಯಕ್ತಿಗೆ ಸುಮಾರು 13 ಸಾವಿರ ರೂಪಾಯಿಗಳನ್ನು ಲಂಚ ಬೇಡಿಕೆ ಇಟ್ಟ ಗ್ರಾಮ ಕರಣಿಕನನ್ನು ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ.
ಚೇಳ್ಯಾರು ಗ್ರಾಮ ಕರಣಿಕ ವಿಜಿತ್ ಪೊಲೀಸರ ಬಲೆಗೆ ಬಿದ್ದಾತ.
ವ್ಯಕ್ತಿಯೊಬ್ಬರು ತನ್ನ ತಾಯಿಯ ಹೆಸರಿನಲ್ಲಿದ್ದ ಜಾಗದಲ್ಲಿ 5 ಸೆಟ್ಸ್ ಜಾಗವನ್ನು ಮಾರಾಟ ಮಾಡುವ ಉದ್ದೇಶದಿಂದ ಅಜ್ಜನ ಮರಣ ಪತ್ರ ಹಾಗೂ ಸಂತತಿ ನಕ್ಷೆ ಮಾಡಲು ಮುಂದಾಗಿದ್ದು ಮಂಗಳೂರು ತಾಲೂಕಿನ ಚೇಳ್ಯಾರು ಗ್ರಾಮದ ಗ್ರಾಮ ಲೆಕ್ಕಿಗ ವಿಜಿತ್ ಬಳಿ ಅರ್ಜಿ ಹಾಕಿದ್ದರು.
ಇನ್ನು ಈತ ನ. 20 ರಂದು ವ್ಯಕ್ತಿಯೊಬ್ಬರಿಗೆ ಕರೆಮಾಡಿ ನಿಮ್ಮ ಅಜ್ಜನ ಮರಣ ಪ್ರಮಾಣ ಪತ್ರ ರೆಡಿಯಾಗಿದೆ, 15 ಸಾವಿರ ಹಿಡಿದುಕೊಂಡು ಬನ್ನಿ ಎಂದು ಹೇಳಿದ್ದರು. ಆಗ ವ್ಯಕ್ತಿಯು ತನ್ನಲ್ಲಿ ಅಷ್ಟು ಹಣ ಇಲ್ಲವೆಂದು ಹೇಳಿದಾಗ ನಾಳೆಯಾದರೂ ತೆಗೆದುಕೊಂಡು ಬನ್ನಿ ಎಂದು ಹೇಳಿದ್ದರು, ಕೊನೆಗೆ 13 ಸಾವಿರ ಹಣವನ್ನು ಸುರತ್ಕಲ್ ನಾಡ ಕಚೇರಿಗೆ ತಂದುಕೊಡಿ ಎಂದು ಹೇಳಿದರು. ಈ ಬಗ್ಗೆ ಆ ವ್ಯಕ್ತಿಯು ಲೋಕಾಯುಕ್ತಕ್ಕೆ ದೂರನ್ನು ನೀಡಿದ್ದು ಹಣ ಪಡೆಯುತ್ತಿರುವಾಗಲೇ ರೆಡ್ ಹ್ಯಾಂಡ್ ಆಗಿ ಅರೆಸ್ಟ್ ಮಾಡಿದ್ದಾರೆ.