ಉಳ್ಳಾಲ, ನ 24 (DaijiworldNews/MS): ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ಹೇಳಿಕೊಳ್ಳಲು ಆಶ್ಚರ್ಯ ಎನಿಸುವಂತಹ ಬಹಳ ನೋವಿನ ಸಂಗತಿ ನಡೆದಿದ್ದು ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರನ್ನು ಭ್ರಷ್ಟಾಚಾರ ಆರೋಪದಡಿಯಲ್ಲಿ ಸಿಬಿಐ ತನಿಖೆ ಮಾಡುತ್ತಿದ್ದರೂ ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ ಸಚಿವ ಸಂಪುಟ ಸಿಬಿಐ ತನಿಖೆಗೆ ಕೊಟ್ಟ ಅನುಮತಿ ವಾಪಾಸು ತೆಗೆದುಕೊಂಡಿರುವುದು ಖಂಡನೀಯ ಎಂದು ಮಾಜಿ ಸಚಿವ, ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಬಿಜೆಪಿ ಮಂಗಳೂರು ಮಂಡಲ ಕಚೇರಿಯಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಯಾವುದೇ ರಾಗದ್ವೇಷಗಳಿಲ್ಲದೆ ಆಡಳಿತ ನಡೆಸುವುದಾಗಿ ಪ್ರಮಾಣವಚನ ಸ್ವೀಕರಿಸಿದ ಸಿದ್ದರಾಮಯ್ಯ ಸಿಬಿಐ ತನಿಖೆಯಿಂದ ಹಿಂದೆಗೆಯುವ ಮೂಲಕ ಒಬ್ಬ ಭ್ರಷ್ಟಾಚಾರ ಆರೋಪ ಹೊತ್ತ ವ್ಯಕ್ತಿಯ ತನಿಖೆಯಿಂದ ಹಿಂದೆ ಸರಿದಿರುವುದು ಖೇದಕರ.
ತನಿಖೆ ಹಂತದಲ್ಲಿರುವ ಆರೋಪದಲ್ಲಿ ಸರಕಾರ ಕೈ ಹಾಕಬಾರದು. ಜನಪ್ರತಿನಿಧಿಗಳು ಸೇರಿದಂತೆ ಕ್ರಿಮಿನಲ್ ಆರೋಪ ಇರುವಾಗ ಸರ್ಕಾರ ಕೈ ಹಾಬಾರದು ಎಂದು ಸುಪ್ರೀಂ ಕೋರ್ಟ್ ತಿಳಿಸಿದ್ದರೂ ಶಾಸನಬದ್ಧ ಸರಕಾರ ಸಚಿವ ಸಂಪುಟದ ಮೂಲಕ ಹಿಂದೆ ಪಡಿದಿದ್ದು ಸಿದ್ಧರಾಮಯ್ಯ ಸರಕಾರ ಭ್ರಷ್ಟಾಚಾರಕ್ಕೆ ಸಂಪೂರ್ಣ ಸಹಕಾರ ಕೊಡುತ್ತಿದೆ ಎಂಬುದು ಜಗಜ್ಜಾರಾಗಿದೆ ಎಂದರು.
ಮುಖ್ಯಮಂತ್ರಿ ಜೊತೆಗೆ ಎಚ್. ಕೆ. ಪಾಟೇಲ್ ರಂತಹ ಅನುಭವಿ ಕಾನೂನು ಸಚಿವರ ಮೂಲಕ ಹಿಂಪಡೆಯಬೇಕಾದರೆ ನಿಮ್ಮದು ಭ್ರಷ್ಟಾಚಾರ ವಿರುದ್ಧ ಹೋರಾಟವಲ್ಲ, ಜನರನ್ನು ಏಮಾರಿಸುತ್ತಾ ಭ್ರಚ್ಟಾಚಾರ ಪೋಷಿಸುತ್ತಿದ್ದೀರಿ. ಸರಕಾರ ಈಮಟ್ಟಕ್ಕೆ ಇಳಿದಿರುವುದು ರಾಜ್ಯದ ಜನತೆಯಲ್ಲಿ ದಿಗ್ಭ್ರಮೆ ಮೂಡಿಸಿದೆ ಎಂದು ವಿಷಾದಿಸಿದರು.
ರಾಜ್ಯ ಉಚ್ಛ ನ್ಯಾಯಾಲಯ ಡಿಕೆಶಿಯವರನ್ನು ಮೂರು ತಿಂಗಳ ತನಿಖೆ ನಡೆಸಲು ಸಿಬಿಐಗೆ ಅನುಮತಿ ನೀಡಿದ್ದನ್ನು ಅದು ಹೇಗೆ ಹಿಂಪಡೆದಿರಿ? ನಿಮ್ಮ ಸರಕಾರ ಭ್ರಷ್ಟಾಚಾರ ಪೋಷಣೆ ಮಾಡುವ ಗ್ಯಾರಂಟಿ ಕೊಟ್ಟಂತಾಗಿದೆ ಎಂದು ಲೇವಡಿ ಮಾಡಿದರು.
ರಾಜ್ಯದಲ್ಲಿ ಈ ಬಾರಿ ಅಂದಾಜಿ ಮುವತ್ತಮೂರು ಸಾವಿರ ಕೋಟಿ ರೂ. ಬೆಲೆಯ ಬೆಳೆ ನಷ್ಟವಾಗಿದ್ದು ಕೇಂದ್ರ ಸರಕಾರಕ್ಕೆ 17ಕೋಟಿ ರೂ. ಮಂಜೂರು ಮಾಡಲು ಮನವಿ ಮಾಡಿದ್ದು ಕೇಂದ್ರ ಸರಕಾರ ಸಿದ್ಧವಾಗಿದೆ. ಆದರೆ ಅದಕ್ಕೂ ಮುಂಚಿತವಾಗಿ ಯೋಚಿಸಬೇಕಿರುವುದೇನೆಂದರೆ ಯಡಿಯೂರಪ್ಪ ಮುಖ್ಯಮಂತ್ರಿ ಆದ ತಕ್ಷಣ ಆ ದಿನಗಳಲ್ಲಿ ಒಬ್ಬ ಬಡವನ ಮನೆ ಬಿದ್ದಾಗ ಪರಿಹಾರ ರೂಪದಲ್ಲಿ ಕೇವಲ 90ಸಾವಿರ ರೂ. ಕೊಡುವ ಪದ್ಧತಿ ಇರುವುದನ್ನು ಮನಗಂಡು ಅದನ್ನು ಐದು ಲಕ್ಷ ರೂ. ಗೆ ಏರಿಸಿದ್ದರು. ಆದರೆ ರಾಜ್ಯ ಸರಕಾರ ಯಾವ ಅನುದಾನ ಬಿಡುಗಡೆ ಮಾಡಿಲ್ಲ. ಕೊಟ್ಟಿರುವುದರಲ್ಲಿ 75ಶೇ. ಕೇಂದ್ರ ಸರಕಾರ ಕೊಟ್ಟಿದ್ದು 25ಶೇ. ಮಾತ್ರ ರಾಜ್ಯ ಸರಕಾರ ಕೊಟ್ಟಿದೆ ಎಂದು ಹೇಳಿದರು. ಹಾಗೆಯೇ ಕೇಂದ್ರ ಸರಕಾರ 22.5ಲಕ್ಷ ಕ್ವಿಂಟಾಲ್ ಅಕ್ಕಿಯನ್ನು ಕೊಡುತ್ತಾ ಬಂದಿದೆ. ಸಿದ್ಧರಾಮಯ್ಯನವರು ಐದು ಕೆ.ಜಿ. ಅಕ್ಕಿ ಬದಲಿಗೆ 170ರೂ. ಕೊಡುತ್ತೇವೆ ಎಂದು ಹೇಳಿದ್ದು ಇನ್ನೂ 80ಶೇ. ಕುಟುಂಬಕ್ಕೆ ತಲುಪಿಲ್ಲ. ಭಾಗ್ಯಲಕ್ಷ್ಮಿ 9.5ಲಕ್ಷ ಕುಟುಂಬಕ್ಕೆ ಕೊಟ್ಟಿಲ್ಲ. ನಿರುದ್ಯೋಗಿಗಳಿಗೆ ಮಂಜೂರು ಮಾಡಬೇಕಾದ ಗ್ಯಾರಂಟಿ ಮೊತ್ತ ಕೊಡುವುದು ಬಿಡಿ, ಅರ್ಜಿಯನ್ನೇ ಸ್ವೀಕರಿಸಿಲ್ಲ. ಯಾವುದೇ ಜನಪರ ಯೋಜನೆ ಕೊಡದೆ ಸಚಿವೆಎಇ ಸಂಪುಟದ ಒಬ್ಬ ಭ್ರಷ್ಟ ಸಚಿವನ ರಕ್ಷಣೆಗೆ ಮುಂದಾಗಿರುವುದು ದುರಂತ ಎಂದರು.
ಜಮೀರ್ ಅಹ್ಮದ್ ಮಾತನಾಡುತ್ತಾ ಸ್ಪೀಕರ್ ಯು.ಟಿ. ಖಾದರ್ ಗೆ ಬಿಜೆಪಿಯವರು ಸಲಾಂ ಹೊಡೆಯುತ್ತಾರೆ ಎಂದು ಹೇಳಿರುವುದು ಸಮಂಜಸವಲ್ಲ. ಅದು ಧರ್ಮ ಆಧಾರಿತವಾಗಿ ವ್ಯಕ್ತಿಗೆ ಸಲಾಂ ಮಾಡುವುದಲ್ಲ. ಸಭಾಪತಿಗಳ ಕುರ್ಚಿಗೂ ಧರ್ಮದ ಲೇಪನ ಮಾಡುವ ವ್ಯಕ್ತಿಯನ್ನು ಸಿದ್ಧರಾಮಯ್ಯ ರಕ್ಷಿಸುತ್ತಿದ್ದು ಭ್ರಷ್ಟಷಾರ ನಡೆಸುತ್ತಿರುವ ವ್ಯಕ್ತಿ ಮಾತ್ರವಲ್ಲದೆ ಧರ್ಮದ ಲೇಪನಗೈಯುವ ವ್ಯಕ್ತಿಯ ಮೇಲೆ ಯಾವುದೇ ಕ್ರಮ ಕೈಗೊಳ್ಳದೆ ರಕ್ಷಣೆ ಮಾಡುತ್ತಿದೆ ಎಂದು ಆರೋಪಿಸಿದರು.
ಮಂಡಲ ಅಧ್ಯಕ್ಷ ಚಂದ್ರಹಾಸ್ ಪಂಡಿತ್ ಹೌಸ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರ್ ,ಕಾರ್ಯದರ್ಶಿ ಸತೀಶ್ ಕುಂಪಲ, ಮಹಿಳಾ ಮೋರ್ಚಾ ಧನಲಕ್ಷ್ಮಿ ಗಟ್ಟಿ, ಮಂಡಲ ,ಉಪಾಧ್ಯಕ್ಷ ಯಶವಂತ ಅಮೀನ್, ರವಿಶಂಕರ್,ಕೋಶಾಧಿಕಾರಿ ಜಿತೇಂದ್ರ ಶೆಟ್ಟಿ ತಲಪಾಡಿಗುತ್ತು, ಮುಖಂಡರಾದ ಜಯಶ್ರೀ ಕರ್ಕೇರ, ರವೀಂದ್ರ ಕಂಬಳಿ,ಕಾರ್ಯದರ್ಶಿ ಆನಂದ ಶೆಟ್ಟಿ ಉಳ್ಳಾಲ ಉಪಸ್ಥಿತರಿದ್ದರು