ಬೆಳ್ತಂಗಡಿ, ನ 24 (DaijiworldNews/AK): ಮಹಿಳೆಯೊಬ್ಬರ ಮೊಬೈಲ್ ಫೋನ್ ಕದ್ದು ಅದರಿಂದ ಹಣ ವರ್ಗಾವಣೆ ಮಾಡಿ, ಮೋಸ ಮಾಡಿದ ಘಟನೆಯ ಕುರಿತು ಬೆಳ್ತಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕುವೆಟ್ಟು ನಿವಾಸಿಯಾಗಿದ್ದ ಅಭಿದಾ ಬಾನು ದೂರು ನೀಡಿದ್ದು,. ಸಿದ್ದಿಕ್ ಹಾಗೂ ಇತರರ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ.ಪರಿಚಯದ ಸಿದ್ದಿಕ್ ಎಂಬಾತ ಮೊಬೈಲ್ ಕದ್ದು ಹಣವನ್ನು ವರ್ಗಾವಣೆ ಮಾಡಿದ್ದಾರೆ ಎಂದು ಕುವೆಟ್ಟು ಗ್ರಾಮದ ಅಭಿದಾ ಬಾನು ಬೆಳ್ತಂಗಡಿ ಪೊಲೀಸ್ ರಾಣೆ ಯಲ್ಲಿ ದೂರು ನೀಡಿದ್ದಾರೆ.
ನ. 9 ರಂದು ಮನೆಯಲ್ಲಿ ಇರದಿದ್ದ ವೇಳೆ ಸಿದ್ದಿಕ್ ಎಂಬಾತ ಅಂದಾಜು ೮ ಸಾವಿರ ರೂ ಮೌಲ್ಯದ ಮೊಬೈಲ್ ಕಳವು ಮಾಡಿದ್ದಾರೆ.ಅಲ್ಲದೇ ಮೊಬೈನಲ್ಲಿ ಪೋನ್ ಪೇ ಮುಖಾಂತರ ಖಾತೆಯಲ್ಲಿದ್ದ 64000 ರೂ. ಹಣದ ಪೈಕಿ 34000 ರೂ ಹಣವನ್ನು ಜಾಫರ್ನಿಗೆ , 25000 ರೂ. ಹಣವನ್ನು ಮಹಮ್ಮದ್ ಎಂಬಾತನಿಗೆ ಹಾಗೂ 2000 ರೂ ಹಣವನ್ನು ಸಿರಾಜ್ ಎಂಬಾತನಿಗೂ ವರ್ಗಾವಣೆ ಮಾಡಿದ್ದಾರೆ ಎಂದು ಬಾನು ದೂರಿದ್ದಾರೆ.
ಸಿದ್ದಿಕ್ ಎಂಬಾತ ಗಂಡನ ಸ್ನೇಹಿತರಾಗಿರುವುದರಿಂದ ಮೊಬೈಲ್ ಮತ್ತು ಹಣವನ್ನು ವಾಪಸು ಹಿಂದುರುಗಿಸಬಹುದು ಎಂದು ಕಾಯಲಾಯಿತು. ಆದರೆ ಈವರೆಗೂ ಹಣ ವಾಪಾಸು ನೀಡ ಹಿನ್ನಲೆಯಲ್ಲಿ ನ.೨೩ ರಂದು ಪೊಲೀಸ್ ರಾಣೆಯಲ್ಲಿ ದೂರು ನೀಡಲಾಗಿದೆ. ಇದೀಗ ಪೊಲೀಸ್ ಠಾಣೆಯಲ್ಲಿ ಅಕ್ರ ನಂ 116/2023 ಕಲಂ; 380,411ಭಾ ದಂ ಸಂ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.