ಮಂಗಳೂರು ನ13:ಎಸಿಪಿ ವ್ಯಾಲೆಂಟೈನ್ ಡಿ'ಸೋಜಾ ಯುಎಸ್ ಎ ಯ ಲಾಸ್ ವೇಗಾಸ್ ನಲ್ಲಿ ನಡೆಯುತ್ತಿರುವ ನ್ಯಾಚುರಲ್ ಬಾಡಿಬಿಲ್ಡಿಂಗ್ ಸ್ಪರ್ಧೆಯಲ್ಲಿ 'ಬೆಸ್ಟ್ ಪೋಸರ್' ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡು ನಗರಕ್ಕೆ ಮತ್ತು ಆರಕ್ಷಕ ಇಲಾಖೆಗೆ ಹೆಸರು ತಂದುಕೊಟ್ಟಿದ್ದಾರೆ. ನವೆಂಬರ್ ೯ ರಿಂದ ೧೨ ರವರೆಗೆ ನಡೆದ ಸ್ವರ್ಧೆಯಲ್ಲಿ ಭಾಗವಹಿಸಿ ಇವರು 'ಬೆಸ್ಟ್ ಪೋಸರ್'ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ. ಅಲ್ಲದೆ ಇವರು ವಲ್ಡ್ ಚಾಂಪಿಯನ್ ಶಿಪ್ ಗೆ ಅರ್ಹತೆ ಪಡೆದಿದ್ದರು. ಇವರು ತಮ್ಮ ಹದಿನಾರನೇಯ ವಯಸ್ಸಿನಿಂದಲೇ ನೈಸರ್ಗಿಕ ಆಹಾರ ಸೇವಿಸಿ ಇವರು ಬಾಡಿ ಬಿಲ್ಡ್ ಮಾಡಿದ್ದು ಇದಕ್ಕಾಗಿ ಯಾವುದೇ ಪಿಲ್ಸ್ ತೆಗೆದುಕೊಳ್ಳುತ್ತಿರಲಿಲ್ಲ ಅನ್ನುತ್ತಾರೆ ಸ್ವತಃ ಎಸಿಪಿ ವ್ಯಾಲೆಂಟೈನ್ ಡಿ'ಸೋಜಾ
ಇಂಟರ್ನ್ಯಾಷನಲ್ ನ್ಯಾಚುರಲ್ ಬಾಡಿ ಬಿಲ್ಡಿಂಗ್ ಅಸೋಸಿಯೇಷನ್ (INBA) ನೈಸರ್ಗಿಕ ಬಾಡಿಬಿಲ್ಡಿಂಗ್ ಅನ್ನು ಪ್ರೋತ್ಸಾಹಿಸಲು ದೃಶ್ಟಿಯಿಂದ ಈ ಸ್ಪರ್ಧೆ ಆಯೋಜಿಸುತ್ತಿದ್ದು, ಭಾಗವಹಿಸುವ ಮೊದಲು ಪ್ರತಿ ಸ್ಪರ್ಧಿಯೂ ಡೋಪಿಂಗ್ ಪರೀಕ್ಷೆಗೆ ಒಳಗಾಗುತ್ತಾರೆ. ಪರೀಕ್ಷಾ ಏಜೆನ್ಸಿ ಮೂಲಕ ಕ್ಲಿಯರೆನ್ಸ್ ಪ್ರಮಾಣಪತ್ರವನ್ನು ಪಡೆದ ನಂತರ, ರಾಂಪ್ ಪ್ರವೇಶಿಸಲು ಅನುಮತಿ ನೀಡಲಾಗುತ್ತದೆ.