ಮಂಗಳೂರು, ಏ 16 (Daijiworld News/SM): ಜಿಲ್ಲಾ ಕಾರಾಗೃಹಕ್ಕೆ ನಗರ ಪೊಲೀಸರು ದಾಳಿ ನಡೆಸಿರುವ ಘಟನೆ ಏಪ್ರಿಲ್ 16ರ ಮಂಗಳವಾರದಂದು ನಡೆದಿದೆ.
ಜೈಲಿನೊಳಗಡೆ ಅಕ್ರಮವಾಗಿ ಬಳಸಲಾಗುತ್ತಿದ್ದ 2 ಮೊಬೈಲ್ ಪೋನ್ ಗಳನ್ನು, ಮೂರು ಸಿಮ್ ಕಾರ್ಡ್ ಗಳು ಮತ್ತು ಎರಡು ಮೆಮೊರಿ ಕಾರ್ಡ್ ಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಅಲ್ಲದೆ ಧೂಮಪಾನಕ್ಕೆ ಬಳಸುತ್ತಿದ್ದ ಸಾಮಾಗ್ರಿಯೊಂದನ್ನೂ ಕೂಡ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ದಾಳಿಯ ವೇಳೆ ಪೊಲೀಸರು ವಶಕ್ಕೆ ಪಡೆದ ಎಲ್ಲಾ ಮೊಬೈಲ್ ಫೋನ್ ಗಳನ್ನು ತಪಾಸಣೆ ನಡೆಸಲಾಗಿದೆ. ಮೊಬೈಲ್ ನಂಬರ್ ಪತ್ತೆ ಹಚ್ಚಿರುವ ಪೊಲೀಸ್ ಅಧಿಕಾರಿಗಳು, ಅವುಗಳಿಂದ ಇತರರಿಗೆ ಸಂಪರ್ಕಿಸಿದ ಮಾಹಿತಿಗಳನ್ನು ಸಂಗ್ರಹಿಸುತ್ತಿದ್ದಾರೆ. ಸದ್ಯ ತನಿಖೆ ಪ್ರಗತಿಯಲ್ಲಿದೆ.