ಮಂಗಳೂರು, ನ 21 (DaijiworldNews/HR): ಸಂಸದ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಬಿರುವೆರ್ ಕುಡ್ಲ ಸ್ಪಂದನ ನಿಧಿಯನ್ನು ಕ್ಯಾನ್ಸರ್ ರೋಗದಿಂದ ಬಳಲುತ್ತಿರುವ ಬಲ್ಲಾಳ್ ಭಾಗ್ ನಿವಾಸಿ ಜಗದೀಶ್ ಶೆಟ್ಟಿಗಾರ್ ಅವರಿಗೆ ನೀಡಲಾಯಿತು.
ಈ ಕಾರ್ಯಕ್ರಮದಲ್ಲಿ ಮಾತಾಡಿದ ಸಂಸದರು, ಕರಾವಳಿ ಕರ್ನಾಟಕದ ಹೆಮ್ಮೆಯ ಸೇವಾ ಸಂಘಟನೆ ಬಿರುವೆರ್ ಕುಡ್ಲ(ರಿ) ಕಳೆದ 9 ವರ್ಷದಲ್ಲಿ ಹತ್ತು ಕೋಟಿಗೂ ಮಿಕ್ಕಿದ ಬಡಜನರಿಗೆ, ಅನಾರೋಗ್ಯ ಪೀಡಿತರಿಗೆ ಸಹಾಯ ಹಸ್ತ, ಸೂರಿಲ್ಲದ ಜನರಿಗೆ ಹತ್ತಕ್ಕೂ ಹೆಚ್ಚಿನ ಮನೆ ವಿತರಣೆ,ಕೊರೋನಾ ಸಂದರ್ಭದಲ್ಲಿ ಉಚಿತ ಸುಸಜ್ಜಿತ ಅಂಬ್ಯುಲೆನ್ಸ್ ಸೇವೆ ಮಾಡಿದ್ದಾರೆ. ಇನ್ನು ಮುಂದೆಯೂ ಸಂಸ್ಥೆ ಇನ್ನಷ್ಟು ಸೇವೆ ಮಾಡಲು ಭಗವಂತನು ಶಕ್ತಿ ನೀಡಲಿ ಎಂದು ಹಾರೈಸಿದರು.
ಸಂದರ್ಭದಲ್ಲಿ ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕರು ಶ್ರೀ ವೇದ ವ್ಯಾಸ ಕಾಮತ್,ಕುದ್ರೋಳಿ ಶ್ರೀ ಗೋಕರ್ಣನಾಥೆಶ್ವರ ದೇವಸ್ಥಾನದ ಅಧ್ಯಕ್ಷರು ಎಚ್. ಎಸ್ ಸಾಯಿರಾಮ್,ಫ್ರೆಂಡ್ಸ್ ಬಲ್ಲಾಳ್ ಭಾಗ್ ಬಿರುವೆರ್ ಕುಡ್ಲ(ರಿ)ಸ್ಥಾಪಕ ಅಧ್ಯಕ್ಷರು ಶ್ರೀ ಉದಯ ಪೂಜಾರಿ, ಲತೀಶ್ ಪೂಜಾರಿ ಬಲ್ಲಾಳ್ ಭಾಗ್, ಬಿಜೆಪಿ ಮುಖಂಡರಾದ ರಂದೀಪ್ ಕಾಂಚನ್, ವಸಂತ್ ಜೆ. ಪೂಜಾರಿ, ಬಿಜೆಪಿ ಯುವಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಶ್ರೀ ರಾಕೇಶ್ ಪೂಜಾರಿ ಚಿಲಿಂಬಿ,ಬತ್ತೇರಿ ಫ್ರೆಂಡ್ಸ್ ಅಧ್ಯಕ್ಷರು ಶ್ರೀ ಗಿರೀಶ್, ಗೌತಮ್ ಕರ್ಕೇರ ಹಾಗೂ ಬಿರುವೆರ್ ಕುಡ್ಲ ಸಂಸ್ಥೆಯ ಸದಸ್ಯರು ಉಪಸ್ಥಿತರಿದ್ದರು.