ಮೂಡುಬಿದಿರೆ, ಏ 16 (Daijiworld News/SM): ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡ ಕಾರಣಕ್ಕೆ ಬೇಸತ್ತು ವಿದ್ಯಾರ್ಥಿನಿಯೋರ್ವಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮವಾರ ನಡೆದಿದೆ. ಮಾಂಟ್ರಾಡಿಯ ಹಿನ್ನಲ ಫಲ್ಕೆ ಮನೆಯ ಜಯ ಶೆಟ್ಟಿಯವರ ಪುತ್ರಿ ಪ್ರತೀಕ್ಷಾ(18) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ.
ಈಕೆ ಮೂಡುಬಿದಿರೆಯ ಟ್ಯುಟೋರಿಯಲ್ನಲ್ಲಿ ಕಲಿತು ಖಾಸಗಿಯಾಗಿ ಪರೀಕ್ಷೆ ಬರೆದಿದ್ದಳು. ಪರೀಕ್ಷೆಯ ಬಳಿಕ ಪ್ರತೀಕ್ಷಾ ಪುಣೆಯಲ್ಲಿರುವ ತನ್ನ ಚಿಕ್ಕಪ್ಪನ ಮನೆಗೆ ತೆರಳಿದ್ದಳು. ಏ 15ರ ಸೋಮವಾರ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದೆ. ಪರೀಕ್ಷೆಯಲ್ಲಿ ಪ್ರತೀಕ್ಷಾ ಅನುತ್ತೀರ್ಣಳಾಗಿದ್ದಳು.
ಅನುತೀರ್ಣಗೊಂಡ ಹಿನ್ನೆಲೆ ನೊಂದ ವಿದ್ಯಾರ್ಥಿನಿ ಪುಣೆಯ ತನ್ನ ಚಿಕ್ಕಪ್ಪನ ಮನೆಯ ಕೋಣೆಯೊಂದರಲ್ಲಿ ಫ್ಯಾನಿಗೆ ಸೀರೆ ಕಟ್ಟಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಳೆ ಎಂದು ತಿಳಿದುಬಂದಿದೆ. ಮಂಗಳವಾರ ಆಕೆಯ ಮೃತದೇಹವನ್ನು ಹುಟ್ಟೂರಿನ ಮನೆಗೆ ತಂದು ಅಂತ್ಯ ಸಂಸ್ಕಾರ ನಡೆಸಲಾಗಿದೆ.