ಮಂಗಳೂರು, ನ 19 (DaijiworldNews/AA): ಸಿಟಿಜನ್ಸ್ ಕೌನ್ಸಿಲ್ ಮಂಗಳೂರು ಚಾಪ್ಟರ್ ಆಯೋಜನೆ ಮಾಡಿದಂತಹ 'ಇಂಡಿಯಾ ಅನ್ಲೀಶ್ಡ್ ಡೆಕೇಡ್ ಅಫ್ ಟ್ರಾನ್ಸ್ ಫಾರ್ಮೇಷನ್ ' ಕಾರ್ಯಕ್ರಮವನ್ನು ಬಿ ಜೆ ಪಿ ರಾಷ್ಟ್ರೀಯ ವಕ್ತಾರರಾದ ಶೆಹಜಾದ್ ಪೂನಾವಾಲಾ ಉದ್ಘಾಟಿಸಿದರು
ಈ ವೇಳೆ ಮಾತನಾಡಿದ ಅವರು, ಜನ್ ಧನ್ ಖಾತೆಯ ಮೂಲಕ ಇಂದು ಎಲ್ಲಾ ಸರಕಾರಿ ಯೋಜನೆಗಳು ಎಲ್ಲಿಯೂ ಸೋರಿಕೆಯಿಲ್ಲದೆ ಜನರನ್ನು ತಲುಪುತ್ತಿದೆ.
ಶೇಕಡಾ 40 ಕ್ಕಿಂತ ಕಡಿಮೆಯಿದ್ದ ಶೌಚಾಲಯ ವ್ಯವಸ್ಥೆ, ಇಂದು ಶೇಕಡ ನೂರರಷ್ಟು ಜನರಿಗೆ ತಲುಪಿದೆ ಎಂದರು.
ಸಾಂಪ್ರದಾಯಿಕ ರೀತಿಯಲ್ಲೇ ಹೆಚ್ಚು ಅಡುಗೆ ಮಾಡುತ್ತಿದ್ದ ನಮ್ಮ ತಾಯಿಯಂದರಿಗೆ ಇಂದು ಹತ್ತು ಕೋಟಿಕ್ಕಿಂತ ಹೆಚ್ಚು ಮನೆಗಳಿಗೆ ಉಚಿತ ಗ್ಯಾಸ್ ನೀಡಲಾಗಿದೆ. ಮಹಿಳಾ ಮೀಸಲಾತಿಯಿಂದ ಹಿಡಿದು ಬೇಟಿ ಬಚಾವ್ ಯೋಜನೆಗಳವರೆಗೆ , ಇವುಗಳಿಂದ ಕಳೆದ ದಶಕ ಮಹಿಳಾ ಸಶಕ್ತೀಕರಣ ದಶಕವಾಗಿ ಪರಿಣಮಿಸಿದೆ ಎಂದು ಹೇಳಿದರು.
ಕಷ್ಟದ ಸನ್ನಿವೇಶದಲ್ಲೂ ಭಾರತ ಜಗತ್ತಿನ 5ನೇ ದೊಡ್ಡದಾದ ಆರ್ಥಿಕತೆಯಾಗಿ ಬೆಳೆದಿದೆ. ಗುಲಾಮಗಿರಿಯ ಮಾನಸಿಕತೆಯಿಂದ ನಿಜವಾಗಿ ನಾವು ಹೊರ ಬಂದದ್ದೇ ಇತ್ತೀಚಿಗೆ.ಇದು ಅತ್ಯಂತ ದೊಡ್ಡ ಪರಿವರ್ತನೆಯಾಗಿದೆ ಎಂದು ಅವರು ಅಭಿಪ್ರಾಯ ಪಟ್ಟರು.
ಸಿಟಿಜನ್ಸ್ ಕೌನ್ಸಿಲಿನ ಉಪಾಧ್ಯಕ್ಷೆಯಾದ ರಮಾ ಸೊರಕೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅಭಿಜಿತ್ ಹೆಗ್ಡೆ ಧನ್ಯವಾದ ಸಮರ್ಪಿಸಿದರು. ಅಕ್ಷತಾ ಶೆಣೈ ನಿರೂಪಿಸಿದರು.