ಮಂಗಳೂರು, ನ 19 (DaijiworldNews/AA): ಆನ್ಲೈನ್ ಸ್ಟಾಕ್ ಟ್ರೇಡಿಂಗ್ ಆ್ಯಪ್ ಮೂಲಕ ಹಣ ಸಂಪಾದಿಸಲು ಹೋದ ವ್ಯಕ್ತಿಯೊಬ್ಬರು 25 ಲಕ್ಷ ರೂ. ಕಳೆದುಕೊಂಡಿದ್ದಾರೆ. ಈ ಬಗ್ಗೆ ಮಂಗಳೂರು ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೂರಿನಲ್ಲಿ ತನ್ನನ್ನು ಆನ್ಲೈನ್ ಸ್ಟಾಕ್ ಟ್ರೇಡಿಂಗ್ ಆ್ಯಪ್ಗೆ ಸೇರಿಸಿದ್ದ ವ್ಯಕ್ತಿ ಮೊದಲಿಗೆ ಸಣ್ಣ ಟಾಸ್ಕ್ ನೀಡಿ ಸ್ವಲ್ಪ ಪ್ರಮಾಣದ ಹಣ ನೀಡುತ್ತಿದ್ದರು. ನಂತರ ದೊಡ್ಡ ಟಾಸ್ಕ್ನಲ್ಲಿ ಭಾಗವಹಿಸುವಂತೆ ಮಾಡಿ 50,000 ರೂ., 4,50,000 ರೂ., 15,00,000 ರೂ., 5,00,000 ರೂ. ನಂತೆ ಹೂಡಿಕೆ ಮಾಡಿಸಿರುತ್ತಾರೆ. ಆ್ಯಪ್ ನಲ್ಲಿ ಹೂಡಿಕೆಯಾದ ಹಣವನ್ನು ವಿತ್ ಡ್ರಾ ಮಾಡಲು ಯತ್ನಿಸಿದಾಗ ಹಣ ವಿತ್ ಡ್ರಾ ಆಗಿಲ್ಲ. ಹೀಗೆ ಆ ವ್ಯಕ್ತಿ ಹಂತ ಹಂತವಾಗಿ 25 ಲಕ್ಷ ರೂ. ವರ್ಗಾವಣೆ ಮಾಡಿಕೊಂಡು ವಂಚನೆ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.