ಉಡುಪಿ , ನ 18 ( DaijiworldNews/AK): ನೇಜಾರು ನಾಲ್ವರ ಹತ್ಯೆ ಪ್ರಕರಣ ಕ್ಷಿಪ್ರವಾಗಿ ಪತ್ತೆ ಮಾಡಿದ ಉಡುಪಿ ಪೊಲೀಸ್ ಇಲಾಖೆಯನ್ನು ಮೃತರ ಕುಟುಂಬ ಇಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಕೆ.ಅರುಣ್ ಅವರನ್ನು ಭೇಟಿಯಾಗಿ ಅಭಿನಂದಿಸಿದರು.
ನೇಜಾರಿನ ನೂರ್ ಮುಹಮ್ಮದ್, ಅವರ ಮಗ ಅಸಾದ್, ಮೃತ ಹಸೀನಾರ ಸಹೋದರ ಅಶ್ರಫ್, ಇವರ ಮಗಳು ಫಾತಿಮಾ ಅಸ್ಬಾ, ಸಂಬಂಧಿಕ ಯಾಸೀನ್, ಕಾಂಗ್ರೆಸ್ ಮುಖಂಡ ಎಂ.ಎ.ಗಫೂರ್ ಅವರು ಎಸ್ಪಿಯವರನ್ನು ಭೇಟಿಯಾಗಿ ಅಭಿನಂದಿಸಿದರು. ನೂರ್ ಮುಹಮ್ಮದ್ ಎಸ್ಪಿ ಅವರಿಗೆ ಕುರಾನ್ ಪ್ರತಿ "ನಾನು ಮಲಾಲಾ" ಪುಸ್ತಕವನ್ನು ನೀಡಿದರು.