ಮಂಗಳೂರು, ನ 18 (DaijiworldNews/AK): ಬೆಳ್ತಂಗಡಿ ತಾಲೂಕಿನ ವಿದ್ಯಾಸಂಸ್ಥೆಯ ಹತ್ತನೇ ತರಗತಿ ವಿದ್ಯಾರ್ಥಿನಿಯ ಮೇಲೆ ಶಾಲೆಯ ಶಿಕ್ಷಕನೇ ಲೈಂಗಿಕ ಕಿರುಕುಳ ನೀಡಿರುವ ಕುರಿತು ವರದಿಯಾಗಿದೆ. . ಅಲ್ಲದೇ ಈ ಘಟನೆಯನ್ನು ಪೊಲೀಸರು ಮುಚ್ಚಿ ಹಾಕುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪ ಕೇಳಿ ಬಂದಿದೆ.
ಈ ಕುರಿತು ಮಾಜಿ ಪೊಲೀಸ್ ಅಧಿಕಾರಿ. ಸಾಮಾಜಿಕ ಕಾರ್ಯಕರ್ತ ಗಿರೀಶ್ ಮಟ್ಟೆಣ್ಣನವರ್ ಸುದ್ದಿಗೋಷ್ಠಿ ನಡೆಸಿ, ಫೋಕ್ಸೋ ಕಾಯ್ದೆಯಡಿ ಮಕ್ಕಳ ಮೇಲೆ ಲೈಂಗಿಕ ಕಿರುಕುಳ ಪತ್ತೆಯಾದ ಕೂಡಲೇ ವೈದ್ಯರು ಪೊಲೀಸರಿಗೆ ತಿಳಿಸಬೇಕು ಎಂಬ ಕಾನೂನು ಇರುವುದರಿಂದ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ವಿದ್ಯಾರ್ಥಿನಿ ಐದು ತಿಂಗಳ ಗರ್ಭಿಣಿಯಾದ ಕಾರಣ ಮಹಿಳಾ ಪೊಲೀಸರು ಹೇಳಿಕೆಯನ್ನು ಪಡೆದಿದ್ದಾರೆ. ಈ ವೇಳೆ ಆಕೆ ತನ್ನ ವಿದ್ಯಾಸಂಸ್ಥೆಯ ಕ್ರೀಡಾ ಶಿಕ್ಷಕ ಎಂಬಾತ ರಮೇಶ್ ಎಂಬಾತ ಲೈಂಗಿಕ ಕಿರುಕುಳ ನೀಡಿದ್ದಾಗಿ ಹೇಳಿಕೆ ನೀಡಿದ್ದಾಳೆ.
ಆಕೆಯ ಹೇಳಿಕೆಯನ್ನು ದೂರು ಎಂದು ಪರಿಗಣಿಸಿ ಮುಂದಿನ ಕ್ರಮಕ್ಕಾಗಿ ಧರ್ಮಸ್ಥಳ ರಾಣೆಗೆ ವರ್ಗಾಯಿಸಲಾಯಿತ್ತು. ಬಳಿಕ ಪ್ರಕರಣಕ್ಕೆ ಸಂಬಂಧಪಟ್ಟಂತೆ ನ.11 ರಂದು ಪೊಲೀಸರು ಆರೋಪಿ ರಮೇಶ ಎಂಬಾತನ್ನು ಧರ್ಮಸ್ಥಳ ರಾಣೆಗೆ ಕರೆಸಿ ವಿಚಾರಣೆ ನಡೆಸಿದ್ದಾರೆ.
ಬಳಿ ಎರಡು ದಿನದ ನಂತರ ಕೇಶವ ಎಂಬಾತನನ್ನು ಆರೋಪಿ ಎಂದು ಎಫ್ ಐ ಆರ್ ಮಾಡಿದ್ದಾರೆ. ಆದರೆ ಸಂತಸ್ತೆ ಬಾಲಕಿ ಹೇಳಿದ್ದ ಆರೋಪಿ ರಮೇಶ ಎಂಬಾತನನ್ನು ರಕ್ಷಣೆ ಮಾಡಲಾಗಿದೆ ಎಂದು ಸಂಶಯ ಸ್ಥಳೀಯರಲ್ಲಿ ಮೂಡಿದೆ. ಈ ಪ್ರಕರಣದಲ್ಲಿ ಪ್ರಭಾವಿ ಸಂಸ್ಥೆಯ ಪ್ರಭಾವಕ್ಕೆ ಒಳಗಾಗಿ ಆರೋಪಿಯನ್ನು ರಕ್ಷಣೆ ಮಾಡುತ್ತಿದ್ದಾರೆ ಎಂದು ಗಿರೀಶ್ ಮಟ್ಟೆಣ್ಣವರ್ ಆರೋಪಿಸಿದ್ದಾರೆ.
ಅಲ್ಲದೇ ಈ ಬಗ್ಗೆ ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಮಾನವ ಹಕ್ಕು ಆಯೋಗಕ್ಕೆ ದೂರು ನೀಡುವುದಾಗಿ ಹೇಳಿದರು. ಅಲ್ಲದೇ ಸಂತಸ್ತೆ ಬಾಲಕಿ ನೀಡುವ ಹೇಳಿಕೆ ಪ್ರಕಾರ ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ.,