ಮಂಗಳೂರು, ಏ 16(Daijiworld News/MSP): 'ಮೋದಿಗೆ ವೋಟ್ ಹಾಕದವರು ತಾಯಿ ಗಂಡ್ರು' ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ಶಾಸಕ ಸಿ.ಟಿ ರವಿ ವಿರುದ್ದ, ಸಚಿವೆ ಜಯಮಾಲಾ ಆಕ್ರೋಶ ವ್ಯಕ್ತಪಡಿಸಿದ್ದು,ಹೆಣ್ಣುಮಕ್ಕಳ ಬಗ್ಗೆ ಸಿ.ಟಿ ರವಿ ಮಾತಾಡಿರುವ ಪರಿ ಅಕ್ಷಮ್ಯ ಅಪರಾಧವಾಗಿದ್ದು ಸಿಟಿ ರವಿ ನಾಲಿಗೆ ಚಪ್ಪಲಿಯೇ..? ಎಂದು ಪ್ರಶ್ನಿಸಿದ್ದಾರೆ.
ಅವರು ನಗರದಲ್ಲಿ ಏ.16 ರ ಮಂಗಳವಾರ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿ, 'ಹೆಣ್ಣುಮಕ್ಕಳ ಬಗ್ಗೆ ಕೀಳಾಗಿ ಮಾತನಾಡಿದ ಸಿ.ಟಿ ರವಿ ವಿರುದ್ಧ ಕಾಂಗ್ರೆಸ್ ಮಹಿಳಾ ಆಯೋಗದಿಂದ ಕೇಸ್ ದಾಖಲಿಸಲು ನಿರ್ಧರಿಸಲಾಗಿದೆ. ಸಿಟಿ ರವಿ ಕೀಳುಮಟ್ಟದ ರಾಜಕಾರಣಿಯಾಗಿದ್ದು, ಅವರ ಬಾಯಿ ಹೊಳಸಾಗಿದೆ. ಇದೇ ಮಾತನ್ನು ಸಿಟಿ ರವಿ ಅವರ ತಾಯಿಗೆ ಹೇಳಿದ್ರೂ ಕೂಡಾ ಇದು ಖಂಡನೀಯ.ಹೆಣ್ಣಿನ ಬಗ್ಗೆ ಲಘುವಾಗಿ ಮಾತನಾದಿದ ಬಿಜೆಪಿ ನಾಯಕ ದೇಶ ಕಾಯಬಲ್ಲನೇ ? ಬಿಜೆಪಿಯವರೇ, ನೀವು ಅಸಲಿಯಾ, ನಕಲಿಯಾ ? ಐದು ವರ್ಷಗಳ ಕಾಲ ಬಿಜೆಪಿ ಸುಳ್ಳು ಹೇಳಿ ಜನರನ್ನು ವಂಚಿಸಿದೆ, ಇದೀಗ ಸುಳ್ಳು ಹೇಳಿ ಆಡಳಿತ ಮಾಡಿದ್ದಕ್ಕೆ ಬಿಜೆಪಿಗೆ ವೋಟ್ ಕೊಡಬೇಕಾ?' ಎಂದು ಬಿಜೆಪಿ ಹಾಗೂ ಸಿಟಿ ರವಿ ವಿರುದ್ದ ವಾಗ್ದಾಳಿ ನಡೆಸಿದರು.
ಸಿ.ಟಿ ರವಿ ಅವರಿಗೆ ಉತ್ತಮ ಬುದ್ದಿ ಬರಲೆಂದು ಕೋರಿಯರ್ ಮೂಲಕ ಅಮ್ಮ ಹೇಳಿದ ಎಂಟು ಸುಳ್ಳುಗಳು ಪುಸ್ತಕ ರವಾನಿಸುತ್ತೇವೆ ಎಂದರು.