ಮಂಗಳೂರು, ನ 17 (DaijiworldNews/RA): ಕಳೆದ ಒಂದು ವಾರದಲ್ಲಿ ನಗರ ಪೊಲೀಸರು ಮಾದಕ ವಸ್ತುಗಳು ಹಾಗೂ ಅಮಲು ಪದಾರ್ಥಗಳ ನಿಯಂತ್ರಣ ಕಾಯ್ದೆ(ಎನ್ಡಿಪಿಎಸ್)ಯಡಿ 42 ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗರವಾಲ್ ಹೇಳಿದ್ದಾರೆ.
ನಿಷೇಧಿತ ಮಾದಕ ದ್ರವ್ಯಗಳ ವಿರುದ್ಧದ ಕಾರ್ಯಾಚರಣೆಯ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಅವರು, "ನವೆಂಬರ್ 6 ರಿಂದ 12 ರವರೆಗೆ 23,550 ಮೌಲ್ಯದ 1 ಕೆಜಿ ಗಾಂಜಾ ಮತ್ತು 2.7 ಲಕ್ಷ ಮೌಲ್ಯದ 54 ಗ್ರಾಂ ಎಂಡಿಎಂಎ ವಶಪಡಿಸಿಕೊಳ್ಳಲಾಗಿದೆ. ಇದರಲ್ಲಿ ಒಟ್ಟು 7ಪ್ರಕರಣ ದಾಖಲಾಗಿದ್ದು 13 ಮಂದಿಯ ಬಂಧನವಾಗಿದೆ. ಮಾದಕ ದ್ರವ್ಯ ಸೇವನೆಗೆ ಸಂಬಂಧಿಸಿದಂತೆ 35 ಪ್ರಕರಣಗಳು ದಾಖಲಾಗಿದ್ದು, 36 ಮಂದಿಯನ್ನು ಬಂಧಿಸಲಾಗಿದೆ" ಎಂದು ಎಂದರು.