ಕಾಸರಗೋಡು, ಎ16(Daijiworld News/SS): ಸಿಗ್ನಲ್ ಫ್ರೀ ವ್ಯವಸ್ಥೆಯಲ್ಲಿ ಆರೋಗ್ಯದ ಸಮಸ್ಯೆಯಿದ್ದ 16 ದಿನದ ಮಗುವನ್ನು ಆಂಬುಲೆನ್ಸ್ ಮೂಲಕ ಮಂಗಳೂರಿನಿಂದ ಕೊಚ್ಚಿಗೆ ಕರೆದೊಯ್ಯಲಾಗಿದೆ. ಉದುಮ ಮುಕ್ಕುನ್ನತ್ ಶಿಹಾಬ್ ತಂಙಲ್ ಚಾರಿಟೇಬಲ್ ಟ್ರಸ್ಟ್ನ ಆಂಬುಲೆನ್ಸ್ ಮೂಲಕ ಮಗುವನ್ನು ಕೊಚ್ಚಿಗೆ ತಲುಪಿಸಲಾಗಿದೆ.
16 ದಿನದ ಹಿಂದೆ ಜನ್ಮನೀಡಿದ ಮಗುವಿಗೆ ಹೃದಯ ಸಂಬಂಧ ಕಾಯಿಲೆ ಕಾಣಿಸಿಕೊಂಡಿತ್ತು. ಹೆಚ್ಚಿನ ಚಿಕಿತ್ಸಾಗಿ ಎರ್ನಾಕುಲಂನಲ್ಲಿರುವ ಆಸ್ಪತ್ರೆಗೆ ತಲುಪಿಸಲು ನಿರ್ದೇಶನ ನೀಡಲಾಗಿತ್ತು.
ಸವಾಲನ್ನು ಸ್ವೀಕರಿಸಿದ ಆಂಬುಲೆನ್ಸ್ ಚಾಲಕ ಹಸನ್ ಕೇವಲ 4 ಗಂಟೆಯೊಳಗೆ ಮಗುವನ್ನು ತಲುಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹಸನ್ ಕೇವಲ 4 ಗಂಟೆಯೊಳಗೆ ರಸ್ತೆಯ ಮೂಲಕ ಮಂಗಳೂರಿನಿಂದ ಹೊರಟು ಕೊಚ್ಚಿ ತಲುಪಿದ್ದಾರೆ.
ಮಂಗಳೂರಿನಿಂದ ಕೊಚ್ಚಿಗೆ ಹೊರಟ ಆಂಬುಲೆನ್ಸ್ ಅನ್ನು ಕಾಸರಗೋಡಿನ ಹಸನ್ ಚಲಾಯಿಸಿದ್ದಾರೆ. ಸಿಗ್ನಲ್ ಫ್ರೀ ವ್ಯವಸ್ಥೆಗಾಗಿ ಅನಾರೋಗ್ಯಕ್ಕೀಡಾಗಿದ್ದ ಮಗುವಿನ ಕುಟುಂಬಸ್ಥರು ಎನ್ಜಿಒ ನೆರವಿನೊಂದಿಗೆ ಸಾಮಾಜಿಕ ತಾಣದಲ್ಲಿ ಪ್ರಚಾರ ಮಾಡಿದ್ದು, ಜನರು ಸಹಕಾರ ನೀಡಿದ್ದಾರೆ.
ಎರ್ನಾಕುಲಂ ಶ್ರೀಚಿತ್ರ ಆಸ್ಪತ್ರೆಗೆ 16 ದಿನ ಪ್ರಾಯದ ಮಗುವನ್ನು ಮಂಗಳೂರಿನಿಂದ ತಲುಪಿಸಬೇಕಿತ್ತು. ಅದಕ್ಕಾಗಿ ಕೇರಳದ ವಿವಿಧ ಜಿಲ್ಲೆಗಳಲ್ಲಿ ಹಾದು ಹೋಗುವಾಗ ಸಂಚಾರ ನಿಯಂತ್ರಿಸಲು ಸೋಶಿಯಲ್ ಮೀಡಿಯಾ ಮೂಲಕ ಪೋಸ್ಟ್ ಹಾಕಲಾಗಿತ್ತು.
ಆಂಬುಲೆನ್ಸ್ ಚಾಲಕ ಹಸನ್ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.