ಮಂಗಳೂರು, ನ 17 (DaijiworldNews/RA) :ಚಾಲಕನ ನಿಯಂತ್ರಣ ಕಳೆದುಕೊಂಡ ಕಾರೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬಳಿಕ ತೆಂಗಿನ ಮರಕ್ಕೆ ಡಿಕ್ಕಿ ಹೊಡೆದ ಘಟನೆ ಪಡುಬಿದ್ರಿ ಸೇತುವೆಯ ಬಳಿ ಇಂದು ನಡೆದಿದೆ.
ಕಾರಿನಲ್ಲಿದ್ದವರು ಅಲ್ಪ ಸಲ್ಪ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ.ಅಪಘಾತಕ್ಕೆ ಈಡಾದ ಕಾರು ಕೇರಳ ನೋಂದಾಯಿತ ಸಂಖ್ಯೆಯನ್ನು ಹೊಂದಿದ್ದು ಇವರು ಮಂಗಳೂರು ನಗರದ ಖ್ಯಾತ ಖಾಸಗಿ ಮೆಡಿಕಲ್ ಆಸ್ಪತ್ರೆಯ ಸಂಬಂಧಿಕರಾಗಿದ್ದಾರೆ ಅಂತ ಹೇಳಲಾಗ್ತ ಇದೆ. ಇನ್ನು ಕಾರ್ ನಲ್ಲಿ ಇಬ್ಬರು ಯುವಕರು ಮತ್ತು ಮೂವರು ಯುವತಿಯರಿದ್ದು ಅವರು ಮಣಿಪಾಲಕ್ಕೆ ಹೋಗಿ ಮಂಗಳೂರಿಗೆ ವಾಪಸ್ ಬರುವ ವೇಳೆ ಅಪಘಾತವಾಗಿದೆ.
ಚಾಲಕನ ಅತೀ ವೇಗದ ಚಾಲನೆಯಿಂದ ಈ ಅವಘಡ ಸಂಭವಿಸಿದ್ದು ಎಂದು ತಿಳಿದು ಬಂದಿದೆ.ಪಡುಬಿದ್ರೆ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.