ಮಂಗಳೂರು, ನ 16 (DaijiworldNews/RA): ಹಿಂದೆ ಕಾಂಗ್ರೆಸ್ ನ ಸಿದ್ಧರಾಮಣ್ಣ ಸರಕಾರದಲ್ಲಿ ಗೋಹತ್ಯೆ, ರೈತರ ಆತ್ಮಹತ್ಯೆ ಹೀಗೆ ಹತ್ಯೆಗಳು ಜಾಸ್ತಿಯಾಗುತ್ತಿತ್ತು. ಇವತ್ತು ಈ ಮೂರು ಪ್ರಕರಣಗಳು ಜಾಸ್ತಿಯಾಗುತ್ತಿದೆ ಎಂದು ಸಂಸದ ನಳೀನ್ ಕುಮಾರ್ ಕಟೀಲ್ ಅವರು ಹೇಳಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ನಂತರ ಹತ್ಯೆ ಪ್ರಕರಣಗಳು ಜಾಸ್ತಿಯಾಗುತ್ತಿದೆಯೇ ಎಂದು ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಪುತ್ತೂರಿನಲ್ಲಿ ಸರಕಾರ ಬಂದ ನಂತರ 6 ತಿಂಗಳ ಒಳಗೆ ಎರಡು ಹತ್ಯೆಗಳು ನಡೆದಿದೆ.
ಉಡುಪಿಯಲ್ಲಿ ನಾಲ್ಕು ಹತ್ಯೆಗಳು ಒಂದೇ ಮನೆಯಲ್ಲಿ ಆಗಿದೆ. ಹಾಗಾದ್ರೆ ಇವತ್ತು ಇಂಟೆಲಿಜೆನ್ಸ್ ಏನು ಮಾಡ್ತಾ ಇದೆ. ಪೊಲೀಸ್ ಇಲಾಖೆ ಏನು ಮಾಡುತ್ತಿದೆ.ಇವತ್ತು ಇವರೆಲ್ಲರ ಕೈ ಕಟ್ಟುವ ಕೆಲಸ ಸರಕಾರ ಮಾಡ್ತ ಇದೆ.
ಸರಕಾರ ಕಣ್ಣುಮುಚ್ಚಿ ನಿದ್ದೆಯಲ್ಲಿ ಇದೆ. ಸರಕಾರ ಟೇಕ್ ಅಫ್ ಆಗ್ತಾ ಇಲ್ಲ.ಅಭಿವೃದ್ಧಿ ಕಾರ್ಯದಲ್ಲಿ ಕುಂಠಿತ ಆಗಿದೆ. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವಲ್ಲಿ ಸಂಪೂರ್ಣ ವಿಫಲವಾಗದೆ .ಸಿದ್ಧರಾಮಣ್ಣ ಯಾವಾಗ...? ಯಾವಾಗ ಮುಖ್ಯಮಂತ್ರಿ ಆಗ್ತಾರೆ ಅವಾಗ ಎಲ್ಲ ಗೂಂಡಾ ರಾಜ್ಯ ಆಗುತ್ತೆ ಎಂದು ವಾಗ್ದಾಳಿ ನಡೆಸಿದರು.