ಕಾಸರಗೋಡು , ನ.12 (DaijiworldNews/AK): ಜಿಲ್ಲೆಯ ಪೈವಳಿಕೆ ಹಾಗೂ ಮೀಂಜ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಹೆಪ ಟೈಟಿಸ್ ಎ (ಹಳದಿ ಜ್ವರ) ಕಾಣಿಸಿ ಕೊಂಡಿದೆ. ಈ ಹಿನ್ನಲೆಯಲ್ಲಿ ನಾಗರಿಕರು ಮುಂಜಾಗ್ರತಾ ಕ್ರಮ ತೆಗೆದು ಕೊಳ್ಳುವಂತೆ ಜಿಲ್ಲಾ ವೈದ್ಯಾಧಿಕಾರಿ ಡಾ. ಎ . ವಿ ರಾಮದಾಸ್ ತಿಳಿಸಿದ್ದಾರೆ.
ಪೈವಳಿಕೆ ಪಂಚಾಯತ್ ವ್ಯಾಪ್ತಿಯಲ್ಲಿ 39 ಹಾಗೂ ಮೀಂಜ ಪಂಚಾಯತ್ ವ್ಯಾಪ್ತಿಯಲ್ಲಿ 15 ಪ್ರಕರಣಗಳು ಪತ್ತೆಯಾಗಿವೆ. ರೋಗ ಹರಡುವಿಕೆಯನ್ನು ತಡೆಗಟ್ಟಲು ನಿಯಂತ್ರಣ ಚಟುವಟಿಕೆ ತೀವ್ರ ಗೊಳಿಸಲಾಗಿದೆ.
ಪರಸ್ಥಿತಿ ಅವಲೋಕನ ನಡೆಸಲಾಗುತ್ತಿದ್ದು, ಕೈಗೊಳ್ಳ ಬೇಕಾದ ಕ್ರಮ ಗಳ ಕುರಿತು ತೀರ್ಮಾನಿಸಲು ಶಾಸಕರು, ಇತರ ಜನ ಪ್ರತಿನಿಧಿ ಗಳು, ಆರೋಗ್ಯ ಕಾರ್ಯಕರ್ತರ ಸಭೆ ಕರೆಯಲಾಗಿದೆ.
ತಜ್ಞ ವೈದ್ಯರು, ಪೆರಿಯ ಕೇಂದ್ರ ವಿಶ್ವ ವಿದ್ಯಾನಿಲಯ ದ ವೈರಾಲಜಿ ವಿಭಾಗದ ತಜ್ಞರನ್ನು ಒಳಗೊಂಡ ತಂಡವು ಸೋಮವಾರ (ನಾಳೆ) ಸ್ಥಳಕ್ಕೆ ಭೇಟಿ ನೀಡಲಿದೆ.
ಹೆಪಟೈಟಿಸ್ ಎ ವೈರಸ್ ರೋಗ ಮಲೀನ ನೀರು, ಆಹಾರ ಮೊದಲಾದವುಗಳಿಂದ ರೋಗ ಹರಡುತ್ತದೆ. ಈ ಬಗ್ಗೆ ಜನರು ಮುನ್ನೆಚ್ಚರಿಕೆ ವಹಿಸುವಂತೆ ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.