ಬಂಟ್ವಾಳ,ನ 13 : ಪುರಸಭೆಯ ಆನ್ ಲೈನ್ ಕೊಠಡಿಯೊಳಗೆ ಬ್ರೋಕರ್ ಗಳು , ಕೆಲ ತಾಲೂಕು ಪಂಚಾಯತ್ ಸದಸ್ಯರು ತೆರಳಿ ರಾಜಾರೋಷವಾಗಿ ನುಗ್ಗಿ ತಮ್ಮ ವ್ಯವಹಾರ ನಡೆಸುತ್ತಿದ್ದು ಇದನ್ನು ಗಂಭೀರವಾಗಿ ಪರಿಗಣಿಸಿ ಕಡಿವಾಣ ಹಾಕುವಂತೆ ಸೋಮವಾರ ನಡೆದ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಸದಸ್ಯರು ಆಗ್ರಹಿಸಿದರು. ಅಧ್ಯಕ್ಷರ ಅನುಮತಿ ಮೇರಗಿನ ವಿಚಾರದಲ್ಲಿ ಪ್ರಸ್ತಾವಿಸಿದ ಸದಸ್ಯ ಗೋವಿಂದ ಪ್ರಭು, ಸದಸ್ಯರೇ ಆ ಕೊಠಡಿಗೆ ಹೋಗುತ್ತಿಲ್ಲ ಆದರೆ ಬ್ರೋಕರುಗಳು, ಕೆಲ ತಾಪಂ ಸದಸ್ಯರು ನೇರವಾಗಿ ಕೊಠಡಿಗೆ ನುಗ್ಗುತ್ತಾರೆಂದು ಇವರನ್ನು ತಡೆಯುವವರು ಯಾರೂ ಇಲ್ಲವೇ ಅಲ್ಲದೆ ಅಲ್ಲಿ ಮಹಿಳಾ ಸಿಬ್ಬಂದಿಗಳೇ ಹೆಚ್ಚಾಗಿ ಕಾರ್ಯನಿರ್ವಹಿಸುತ್ತಾರೆ. ಇದೆಲ್ಲದನ್ನು ಕಂಡು ಕಾಣದಂತೆ ಇದ್ದು ಕ್ರಮ ಕೈಗೊಳ್ಳದ ಮುಖ್ಯಾಧಿಕಾರಿಯವರನ್ನು ತರಾಟೆಗೆ ತೆಗೆದುಕೊಂಡರು.ಅಧ್ಯಕ್ಷ ರಾಮಕೃಷ್ಣ ಆಳ್ವ ಸಹಿತ ಸದಸ್ಯರಾದ ಜಗದೀಶ ಕುಂದರ್,ಗಂಗಾಧರ,ಶರೀಫ್ ರವರು ಧ್ವನಿಗೂಡಿಸಿ,ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಆ ಕೊಠಡಿಗೆ ಯಾರಿಗೂ ಪ್ರವೇಶವಿಲ್ಲ ಎಂಬ ಫಲಕ ಹಾಕುವಂತೆ ಸೂಚಿಸಿದರು. ಕೈಕುಂಜೆಯಲ್ಲಿ ನಿರ್ಮಾಣವಾಗುತ್ತಿರುವ ಕನ್ನಡ ಭವನಕ್ಕೆ ಕಾನೂನಿನಲ್ಲಿ ಅವಕಾಶವಿದ್ದರೆ ಅನುದಾನ ನೀಡುವುದಕ್ಕೆ ಅಭ್ಯಂತರವಿಲ್ಲ ಎಂದು ದೇವದಾಸ ಶೆಟ್ಟಿ ಹೇಳಿದರೆ,ಪುರಸಭೆಯಿಂದ ನಿರಾಪೇಕ್ಷಣಾ ಪತ್ರ ಪಡೆಯದೆ ಭವನ ನಿರ್ಮಿಸಲಾಗುತ್ತಿದೆ.ಆರು ತಿಂಗಳ ಹಿಂದೆಯಷ್ಠೆ ಅದಕ್ಕೆ ತರಾತುರಿಯಲ್ಲಿ ತಹಶೀಲ್ದಾರರು ದಾಖಲೆ ಪತ್ರ ತಯಾರಿಸಿ ಕೊಟ್ಟಿದ್ದಾರೆ.ಈ ಸಂಬಂಧ ಪೂರ್ತಿ ಮಾಹಿತಿ ಇದೆ.ಪಾರ್ಕಿಂಗ್ ಮತ್ತಿತರ ಉದ್ದೇಶಕ್ಕೆ ಈ ಹಿಂದೆ ಸರಕಾರದಿಂದ 54 ಸೆಂಟ್ಸ್ ಸ್ಥಳವನ್ನು ಪುರಸಭೆ ಖರೀದಿಸಿತ್ತು.ಆ ಜಾಗ ಎಲ್ಲಿ ಹೋಗಿದೆ. ಮಾರ್ಕೆಟ್ ಗೆಂದು ಎಪಿಎಂಸಿ ಗೆ ನೀಡಿದ ಜಾಗವನ್ನು ಅತಿಕ್ರಮಿಸಲಾಗಿದೆ .ಪಾರ್ಕಿಂಗ್ ಮೀಸಲುಜಾಗವನ್ನು ಎಲೆಕ್ಟ್ರಾನಿಕ್ಸ್ ಮಳಿಗೆ ಸಹಿತ ಖಾಸಗಿಯವರು ಕಬ್ಜಾ ಮಾಡಿದ್ದಾರೆ. ಜಿಲ್ಲಾಧಿಕಾರಿಯವರು ಪಾರ್ಕಿಂಗ್ ಗೆ ಸೂಕ್ತ ಎಂದು ತಿಳಿಸಿದ್ದರು.ಆದರೆ ಅಲ್ಲಿ ರಾಜಕೀಯ ಒತ್ತಡ ತಂದು ಟ್ರಾನ್ಸ್ ಫಾರ್ಮರ್ ಅಳವಡಿಸಲಾಗಿದೆ ಎಂದು ಗೋವಿಂದ ಪ್ರಭು ಸಭೆಯ ಗಮನಸೆಳೆದರಲ್ಲದೆ ಕೈಕುಂಜ ರಸ್ತೆ ಯೇ ಮೂಲನಕ್ಷೆಯಲ್ಲಿಲ್ಲ ಎಂಬುದಕ್ಕಾಗಿಯೇ ಲೋಕಾಯಕ್ತಕ್ಕೆ ದೂರು ನೀಡಿದ್ದೇನೆ ಎಂದರು.ಬೀದಿ ವ್ಯಾಪಾರಿಗಳಿಗೆ ವ್ಯಾಪಾರಿ ವಲಯ ನಿರ್ಮಿಸಲು ಬಡ್ಡಕಟ್ಟೆ,ಜಕ್ರಿಬೆಟ್ಟು,ಬಿ.ಸಿ.ರೋಡಿನಲ್ಲಿ ಜಾಗ ಗುರುತಿಸಲು ನಿರ್ಧರಿಸಲಾಯಿತು.ಮೂರು ದಿನದೊಳಗೆ ಬಡ್ಡಕಟ್ಟೆ ಶೌಚಾಲಯವನ್ನು ಶುಚಿಗೊಳಿಸಲಾಗುವುದು ಎಂದು ಸದಸ್ಯ ಪ್ರವೀಣ್ ಅವರ ಪ್ರಶ್ನೆಗೆ ಮುಖ್ಯಾಧಿಕಾರಿ ರೇಖಾ ಶೆಟ್ಟಿ ಭರವಸೆಯಿತ್ತರು.
ನೋಟಿಸ್ ಜಾರಿಯಾಗಿಲ್ಲ:ಮನೆ,ಮನೆಯಿಂದ ಕಸ ವಿಲೇವಾರಿಗೆ ಸಂಬಂಧಿಸಿ ಪುರಸಭೆಯ ಹೆಸರಿನಲ್ಲಿ 30 ರೂ.ಗೆ ಬದಲು ಹೆಚ್ಚುವಾರಿಯಾಗಿ 50 ರೂ. ಸಂಗ್ರಹಿಸುತ್ತಿರುವ ಹಿನ್ನಲೆಯಲ್ಲಿ ಗುತ್ತಿಗೆದಾರನಿಗೆ ಪುರಸಭೆಯಿಂ ಶೋಕಾಸ್ ನೊಟೀಸ್ ಜಾರಿ ಮಾಡುವ ನಿರ್ಣಯ ಕೈಗೊಳ್ಳ ಲಾಗಿತ್ತಾದರೂ,ಪುರಸಭೆ ಗುತ್ತಿಗೆದಾರನಿಗೆ ನೊಟೀಸ್ ಜಾರಿಗೊಳಿಸದಿರುವುದು ಬೆಳಕಿಗೆ ಬಂತು.ಈಬಗ್ಗೆ ಸದಸ್ಯ ದೇವದಾಸ ಶೆಟ್ಟಿಯವರ ಪ್ರಶ್ನೆಗೆ ಅಧ್ಯಕ್ಷರು,ಮುಖ್ಯಾಧಿಕಾರಿಯವರು ಮುಖಮುಖ ನೋಡಿ ಗೊಣಗಿಕೊಂಡರು ಕಿರುನಗೆ ಬೀರಿ,ವಿಷಯಾಂತರಿಸಿದರು.ಇತ್ತೀಚೆಗೆ ನೇತ್ರಾವತಿ ನದಿಯಲ್ಲಿ ಕೋಳಿ ತ್ಯಾಜ್ಯ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರಿಗೆ ದೂರು ನೀಡಲಾಗಿದೆ.ಸದಸ್ಯರಿಂ ಮಾಹಿತಿ ಬಂದಾಕ್ಷಣ ಸ್ಥಳಕ್ಕೆ ತೆರಳಿ ಅದನ್ನು ತೆರವುಗೊಳಿಸಲಾಗಿದೆ.ಕೋಳಿ ತ್ಯಾಜ್ಯ ಎಸೆಯುವವರ ಬಗ್ಗೆ ನಾವೇ ಮಾಹಿತಿ ನೀಡಿದರೆ ಅಂತಹವರ ವಿರುದ್ದ ಕ್ರಮ ಜರಗಿಸುವುದಾಗಿ ಪೊಲೀಸರು ದು ಮುಖ್ಯಾಧಿಕಾರಿಯವರು ತಿಳಿಸಿದ್ದಾರೆ.ಪುರಸಭೆ ಆದಾಯದಲ್ಲಿ ಹಿನ್ನಡೆಯಾಗುತ್ತಿರುವ ಬಗ್ಗೆ ಆಡಳಿತ ಪಕ್ಷದ ಸದಸ್ಯರೇ ಗರಂ ಅದ ಪ್ರಸಂಗವು ನಡೆಯಿತು.ನೀರಿನ ಕರ ಸಹಿತ ವಿವಿಧ ವಿಚಾರದಲ್ಲಿ ಆದಾಯ ಹೆಚ್ಚಿಸುವ ಬಗ್ಗೆ ಸಲಹೆ ನೀಡಿದರೂ ಕ್ರಮ ಕೈ ಗೊಳ್ಳದ ಬಗ್ಗೆ ಸದಸ್ಯ ಸದಾಶಿವ ರ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು..ಅಧ್ಯಕ್ಷ ರಾಮಕೃಷ್ಣ ಆಳ್ವ,ಉಪಾಧ್ಯಕ್ಷ ಮಹಮ್ಮದ್ ನಂದರ ಬೆಟ್ಟು,ಸ್ಥಾಯಿ ಸಮಿತಿ ಅಧ್ಯಕ್ಷ ವಾಸುಪೂಜಾರಿ ವೇದಿಕೆಯಲ್ಲಿದ್ದರು