ಉಡುಪಿ, ನ 12 (DaijiworldNews/HR): ಉಡುಪಿ- ಮಣಿಪಾಲ ಮುಖ್ಯ ರಸ್ತೆ (ರಾ.ಹ169ಎ) ಬೀದಿದೀಪ ಉದ್ಘಾಟನೆಯನ್ನು ಶಾಸಕ ಯಶ್ ಪಾಲ್ಸುವರ್ಣ ನೆರವೇರಿಸಿ, ಇದು ನಗರದ ಜನರಿಗೆ ದೀಪಾವಳಿಯ ಉಡುಗೂರೆ ಎಂದರು.
"ಸಾಕಷ್ಟು ದಿನಗಳಿಂದ ಈ ಮಾರ್ಗದಲ್ಲಿ ಬೀದಿದೀಪ ಇಲ್ಲದ ವಾಹನ ಸಂಚಾರ ಜನರ ಓಡಾಟಕ್ಕೆ ಸಮಸ್ಯೆಯಾಗಿತ್ತು. ಆರಂಭದಲ್ಲಿ ಬೀದಿದೀಪದ ಬಗ್ಗೆ ಟೆಂಡರ್ನಲ್ಲಿ ಉಲ್ಲೇಖ ಆಗಿರಲಿಲ್ಲ ಈ ತಾಂತ್ರಿಕ ಸಮಸ್ಯೆಯನ್ನು ಸರಿಪಡಿಸಿ ಜಿಲ್ಲಾಡಳಿತ, ಹೆದ್ದಾರಿ ಇಲಾಖೆ, ನಗರಸಭೆ ಸಹಕಾರದಲ್ಲಿ ಬಿಲ್ಟ್ ಆಪರೇಶನ್, ಮೈಂಟನನ್ ಮಾದರಿಯಲ್ಲಿ ಯೋಜನೆಯನ್ನು ಅನುಷ್ಠಾನ ಮಾಡಲಾಗಿದೆ. ಕುಂಜಿಬೆಟ್ಟಿನಿಂದ ಮಣಿಪಾಲದವರೆಗೂ 178 ಬೀದಿದೀಪಗಳಿವೆ. ಮುಂದಿನ ಹಂತದಲ್ಲಿ ಪರ್ಕಳದಿಂದ ಮಣಿಪಾಲ, ಪೆರಂಪಳ್ಳಿ ರಸ್ತೆ, ಮಣಿಪಾಲ-ಅಲೆವೂರು ರಸ್ತೆಯಲ್ಲೂ ಬೀದಿದೀಪ ಬರಲಿದೆ" ಎಂದರು.
ಜಿಲ್ಲಾಧಿಕಾರಿ ಡಾ. ಕೆ.ವಿದ್ಯಾಕುಮಾರಿ, ಪೌರಾಯುಕ್ತ ರಾಯಪ್ಪ ನಿರೂಪಿಸಿದರು. ಈ ಸಂಧರ್ಭದಲ್ಲಿ ಎಸ್ಪಿ ಡಾ. ಅರುಣ್ ಕೆ, ನಗರಸಭೆ ಸದಸ್ಯರು, ಅಧಿಕಾರಿಗಳು ಉಪಸ್ಥಿತರಿದ್ದರು.
ಈ ರಸ್ತೆಯಲ್ಲಿ ಬೀದಿ ದೀಪ ಇಲ್ಲದೇ ಹಲವಾರು ಅಪಘಾತಗಳು ನಿರಂತರವಾಗಿ ಸಂಭವಿಸುತಿದ್ದವು ಮಾತ್ರವಲ್ಲದೇ ವಾಹನ ಸವಾರರಿಗೆ ಕೂಡಾ ತೀವ್ರ ತೆರನಾದ ತೊಂದರೆ ಅನುಭವಿಸುವಂತಾಗಿತ್ತು. ಈ ಕುರಿತಾಗಿ ದಾಯ್ಜಿವಲ್ಡ್ ಈ ಹಿಂದೆ ವಿವರವಾದ, ಜನಪರ ವರದಿಯನ್ನು ಪ್ರಕಟಿಸಿತ್ತು.