ಮಂಗಳೂರು, ನ 12 (DaijiworldNews/MS): ಕೂಳೂರು ಸೇತುವೆ ಬಳಿಯ ಕುದುರೆಮುಖ ಜಂಕ್ಷನ್ ಬಳಿ ಸಹೋದರರು ಒಟ್ಟಾಗಿ ಹೋಗುತ್ತಿದ್ದ ದ್ವಿಚಕ್ರ ವಾಹನಕ್ಕೆ ಖಾಸಗಿ ಕಾಲೇಜಿನ ಬಸ್ ವೊಂದು ಢಿಕ್ಕಿ ಹೊಡೆದ ರಸ್ತೆಗೆ ಬಿದ್ದಾಗ ಲಾರಿ ಹರಿದ ಪರಿಣಾಮ ಓರ್ವ ಸ್ಥಳದಲ್ಲೇ ಮೃತಪಟ್ಟು, ಮತ್ತೋರ್ವ ಗಂಭೀರ ಗಾಯಗೊಂಡಿರುವ ಘಟನೆ ಶುಕ್ರವಾರ ಸಂಜೆ ನಡೆದಿದೆ.
ಮೃತಪಟ್ಟವರನ್ನು ಕೃಷ್ಣಾಪುರ 4ನೇ ಬ್ಲಾಕ್ ನಿವಾಸಿ ಬಶೀರ್(42) ಎಂದು ಗುರುತಿಸಲಾಗಿದ್ದು, ಅವರ ಸಹೋದರ ಆಶ್ರಫ್(52) ಗಂಭೀರ ಗಾಯಗೊಂಡಿದ್ದು, ನಗರದ ಆಸ್ಪತ್ರೆಗೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬಶೀರ್ ಮತ್ತು ಅವರ ಅಣ್ಣ ಅಶ್ರಫ್ ಜೋಕಟ್ಟೆಯಿಂದ ಕುದುರೆಮುಖವಾಗಿ ಕೃಷ್ಣಾಪುರಕ್ಕೆ ತಮ್ಮ ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದ ವೇಳೆ ಕಾಲೇಜಿನ ಬಸ್ ಢಿಕ್ಕಿ ರಸ್ತೆಗೆ ಬಿದ್ದಿದ್ದು, ಅದೇ ವೇಳೆ ವೇಗವಾಗಿ ಬಂದ ಲಾರಿ ಹರಿಯಿತು ಎನ್ನಲಾಗಿದೆ.
ಘಟನೆಗೆ ಸಂಬಂಧಿಸಿ ಮಂಗಳೂರು ಉತ್ತರ ಸಂಚಾರ ವಿಭಾಗದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.