ಸುಬ್ರಹ್ಮಣ್ಯ, ಎ16(SS): ಕೇಸರಿ ಶಾಲು ತಾನು ಧರಿಸುತ್ತಿರುವುದಕ್ಕೆ ಬಿಜೆಪಿಯವರು ನನ್ನ ಬಗ್ಗೆ ಅಪಪ್ರಚಾರ ನಡೆಸುತ್ತಿದ್ದಾರೆ. ಇದು ನನಗೆ ಬೇಸರವಾಗಿದೆ ಎಂದು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಹೇಳಿದ್ದಾರೆ.
ಚುನಾವಣಾ ಪ್ರಚಾರದ ಬಳಿಕ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ಒಂದು ಬಾರಿ ನನಗೆ ಅವಕಾಶ ಮಾಡಿಕೊಡಿ. ನಾನು ಗೆದ್ದಲ್ಲಿ ಜಿಲ್ಲೆಯಲ್ಲಿ ಸಾಮರಸ್ಯದ ಜತೆಗೆ ಯುವಕರಿಗೆ ಉದ್ಯೋಗ ಸೃಷ್ಟಿಗೆ ಶ್ರಮ ವಹಿಸುತ್ತೇನೆ. ಆದರೆ ನಾನು ಕೇಸರಿ ಶಾಲು ಧರಿಸುತ್ತಿರುವುದಕ್ಕೆ ಬಿಜೆಪಿಯವರು ನನ್ನ ಬಗ್ಗೆ ಅಪಪ್ರಚಾರ ನಡೆಸುತ್ತಿದ್ದಾರೆ. ಇದು ನನಗೆ ಬೇಸರವಾಗಿದೆ ಎಂದು ಹೇಳಿದರು.
ಕಡಬದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯೊಂದರಲ್ಲಿ ಮಾತನಾಡಿದ್ದ ಮಿಥುನ್ ರೈ, ನಾನು ಅಪ್ಪಟ ಹಿಂದೂ ಸಂಸ್ಕೃತಿಯಲ್ಲಿ ಬೆಳೆದವನು. ಬಿಜೆಪಿಯವರ ಕೋಮುವಾದಿ ಹಿಂದುತ್ವ ನಮ್ಮದಲ್ಲ. ಕೇಸರಿ ಶಾಲು ಬಿಜೆಪಿಯವರ ಸೊತ್ತಲ್ಲ. ನಾವು ಕೇಸರಿ ಧರಿಸಿದರೆ ಮುಸ್ಲಿಮರಿಗೆ, ಕ್ರೈಸ್ತರಿಗೆ ಹಾಗೂ ಹಿಂದೂ ಸಮುದಾಯಕ್ಕೆ ಸಮಸ್ಯೆ ಇಲ್ಲ. ಆದರೆ ನಮ್ಮ ಹೆಗಲ ಮೇಲೆ ಕೇಸರಿ ಕಂಡರೆ ಬಿಜೆಪಿ ಅಭ್ಯರ್ಥಿ ನಳಿನ್ಕುಮಾರ್ ಕಟೀಲು ಅವರಿಗೇಕೆ ಉರಿ ಎಂದು ಪ್ರಶ್ನಿಸಿದ್ದರು.
ಇದೀಗ ಮಿಥುನ್ ರೈ, ಕೇಸರಿ ಶಾಲು ತಾನು ಧರಿಸುತ್ತಿರುವುದಕ್ಕೆ ಬಿಜೆಪಿಯವರು ನನ್ನ ಬಗ್ಗೆ ಅಪಪ್ರಚಾರ ನಡೆಸುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.