ಮಂಗಳೂರು, ನ 8 (DaijiworldNews/RA): ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತಲೆದೋರಿರುವ ಇಂದಿನ ಈ ಮರಳಿನ ಸಮಸ್ಯೆಗೆ ನಾಲ್ಕು ವರ್ಷ ನಡೆಸಿದ ಸರಕಾರವೇ ಕಾರಣ ಹೊರತು ನಾವಲ್ಲ ಎಂದು ಬಿಜೆಪಿ ಶಾಸಕ ವೇದವ್ಯಾಸ್ ಕಾಮತ್ ವಿರುದ್ಧ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ವಾಗ್ಧಾಳಿ ನಡೆಸಿದ್ದಾರೆ.
ಈ ಕುರಿತು ಮಂಗಳೂರಿನ ಜಿಲ್ಲಾ ಕಾಂಗ್ರೆಸ್ ಕಚೇರಿಯ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಯು.ಟಿ ಖಾದರ್ ಅವರು ಸಚಿವರಾಗಿದ್ದಾಗ ಸ್ಯಾಂಡ್ ಬಜಾರ್ ಆಯಪ್ ಪ್ರಾರಂಭ ಮಾಡಿದ್ದರು. ಆಗ ಜನಸಾಮಾನ್ಯರಿಗೆ ಕ್ಲಪ್ತ ಸಮಯದಲ್ಲಿ ಮರಳು ಸಿಗುವ ವ್ಯವಸ್ಥೆ ಇತ್ತು.
ಅದನ್ನು ಯಾರು ನಿಲ್ಲಿಸಿದ್ರು...? ಯಾಕೆ ನಿಲ್ಲಿಸಿದ್ರು ...?. ಇದು ಮರಳು ಮಾಫಿಯಾ ಅಂತ ಹೆಸರಾಗಿದ್ದು ಇದು ಯಾವಾಗ ಪ್ರಾರಂಭ ಆಯಿತು ಅನ್ನುವುದು ಸ್ವಲ್ಪ ನೆನಪಿಸಿಕೊಳ್ಳಬೇಕು ಎಂದು ಪರೋಕ್ಷ ವಾಗಿ ಬಿಜೆಪಿ ಮೇಲೆ ಆರೋಪಿಸಿದರು.
ನಮ್ಮ ಸರಕಾರ ಆಡಳಿತಕ್ಕೆ ಬಂದು ಆಗಿರುವುದು ನಾಲ್ಕು ತಿಂಗಳು.ಡಬಲ್ ಇಂಜಿನ್ ಸರಕಾರದಲ್ಲಿ ಈ ಸಮಸ್ಯೆ ಸರಿಪಡಿಸುವ ಅವಕಾಶವಿದ್ದರೂ ಆ ಪ್ರಯತ್ನವನ್ನು ಅವರು ಯಾಕೆ ಮಾಡಿಲ್ಲ.ಈ ವಿಚಾರದಲ್ಲಿ ಒಂದು ಸಲವಾದರೂ ರಾಜ್ಯದ ನಿಯೋಗ ಕೇಂದ್ರಕ್ಕೆ ಹೋಗಿ ಮನವಿ ಮಾಡಿದೆಯೇ ಎಂದು ಹರೀಶ್ ಪ್ರಶ್ನಿಸಿದರು.